Site icon PowerTV

ಪವರ್ ಬೇಟೆ ನಂ.30 : ಡೀಲ್ ವೇಳೆ ‘ಸ್ಫೋಟಕ ವಿಷಯ’ ಬಾಯ್ಬಿಟ್ಟ ಕೈ ಶಾಸಕ ‘ಸಂಗಮೇಶ್’

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದತ್ತ ಪವರ್ ಟಿವಿ ಸ್ಟಿಂಗ್ ತಿನಿಖಾ ತಂಡ ಮುಖ ಮಾಡಿದಾಗ ನಮ್ಮ ಕಣ್ಣಿಗೆ ಬಿದ್ದ ಲಂಚಬಾಕ ಕಾಂಗ್ರೆಸ್ ಶಾಸಕ. ಡೀಲ್ ವೇಳೆ ಕಾಂಗ್ರೆಸ್ ಬಗ್ಗೆಯೇ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

ಹೌದು, ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 30ನೇ ಶಾಸಕ ತುಂಬಾನೇ ಡಿಫರೆಂಟ್. ಅವರೇ, ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್.

ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರಿಂದಲೂ ಡೀಲ್ ಮಾತುಕತೆ ನಡೆದಿತ್ತು. ಭದ್ರಾವತಿಯಲ್ಲಿರುವ ತಮ್ಮ ನಿವಾಸದಲ್ಲಿಯೇ ನಮ್ಮ ಸ್ಟಿಂಗ್ ತಂಡದ ಜೊತೆಗೆ ಡೀಲ್ ನಡೆಸಿತ್ತು. ಓಎಫ್​ಸಿ ಕೇಬಲ್ ಅಳವಡಿಸಲು ಪರ್ಮಿಶನ್ ನೀಡಲು ಬರೋಬ್ಬರಿ 6 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಕಿಲೋಮೀಟರ್​ಗೆ 6 ಲಕ್ಷ ಡಿಮ್ಯಾಂಡ್

ಪ್ರತೀ ಕಿಲೋಮೀಟರ್​ಗೆ 2 ಲಕ್ಷ ರೂಪಾಯಿ ನೀಡುವಂತೆ ಶಾಸಕ ಸಂಗಮೇಶ್ ಡಿಮ್ಯಾಂಡ್​ ಮಾಡಿದ್ದರು. ಒಟ್ಟು ಮೂರು ಕಿಲೋಮೀಟರ್​ಗೆ 6 ಲಕ್ಷ ನೀಡುವಂತೆ ಸಂಗಮೇಶ್ ತಾಕೀತು ಮಾಡಿದ್ದರು. ಅಡ್ವಾನ್ಸ್ ರೂಪದಲ್ಲಿ ಒಂದೂವರೆ ಲಕ್ಷ ರೂಪಾಯಿ ಸ್ವೀಕರಿಸುವ ಪವರ್ ಟಿವಿ ತನಿಖಾ ತಂಡದ ಬಲೆಗೆ ಬಿದ್ದಿದ್ದಾರೆ ಶಾಸಕ ಸಂಗಮೇಶ್.

ಸೋದರಿ ಮಗನಿಗೆ ಹಣ ನೀಡಿ ಎಂದ ಸಂಗಮೇಶ್

ಡೀಲ್​​​ನ ಉಳಿದ ಹಣವನ್ನು ಬೆಂಗಳೂರಿನಲ್ಲಿರುವ ಸೋದರಿ ಮಗನಿಗೆ ತಲುಪಿಸಲು ಶಾಸಕ ಸಂಗಮೇಶ್ ಸೂಚನೆ ನೀಡಿದ್ದರು. ಬೆಂಗಳೂರಿನ ವಿಜಯನಗರದಲ್ಲಿರುವ ಮನೆಯಲ್ಲಿ ಉಳಿದ ನಾಲ್ಕೂವರೆ ಲಕ್ಷ ನೀಡಬೇಕು ಎಂದು ಹೇಳಿದ್ದರು. ಇದಲ್ಲದೆ, ಉಳಿದ ಕೆಲವು ಯೋಜನೆಗಳ ಬಗ್ಗೆಯೂ ಶಾಸಕ ಸಂಗಮೇಶ್ ಮಾಹಿತಿ ಹಂಚಿಕೊಂಡಿದ್ದರು.

ಹೆಸರು: ಬಿ.ಕೆ ಸಂಗಮೇಶ್

ಪಕ್ಷ: ಕಾಂಗ್ರೆಸ್

ಕ್ಷೇತ್ರ: ಭದ್ರಾವತಿ

ಜಿಲ್ಲೆ: ಶಿವಮೊಗ್ಗ

ಸ್ಥಳ: ಶಾಸಕರ ನಿವಾಸ, ಭದ್ರಾವತಿ

ಲಂಚ: ಎರಡು ಲಕ್ಷ ರೂಪಾಯಿ

Exit mobile version