Site icon PowerTV

ಪವರ್ ಬೇಟೆ ನಂ.27 : ‘ಎಲ್ರಿಗೂ ಏನು ಕೊಡ್ತೀರೋ’ ಅದನ್ನೇ ಕೊಡಿ ಎಂದ ‘ಕೈ’ ಶಾಸಕಿ

ಬೆಂಗಳೂರು : ಯಾರಪ್ಪಾ ನೀವು? ಏನು ವಿಷಯ? ಯಾವ ಕೇಬಲ್? ಓಎಫ್​ಸಿ ಕೇಬಲ್ ಅಳವಡಿಕೆ ಮಾಡ್ತಿರೇನು? ಒಕೆ, ಎಲ್ಲರಿಗೂ ಎಷ್ಟು ಕೊಟ್ಟಿದ್ದೀರಿ.. ‘ಎಲ್ರಿಗೂ ಏನು ಕೊಡ್ತೀರೋ’ ಅದನ್ನೇ ನನಗೂ ಕೊಡಿ ಅಷ್ಟೇ!

ಇದು, ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (ಮಹಿಳಾ) ಶಾಸಕಿ ಕುಸುಮಾವತಿ ಶಿವಳ್ಳಿ ಅವರ ಲಂಚಾವತಾರ. ಪವರ್ ಟಿವಿ ಮೆಗಾ ಬೇಟೆಯಲ್ಲಿ ಕುಸುಮಾವತಿ ಶಿವಳ್ಳಿ ಲಂಚಾವತಾರ ಜಗಜ್ಜಾಹಿರು ಆಗಿದೆ.

ಪವರ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 28ನೇ ಬೇಟೆಯೇ ಕಾಂಗ್ರೆಸ್ ಮಹಿಳಾ ಶಾಸಕಿ ಕುಸುಮಾವತಿ ಶಿವಳ್ಳಿ. ಇವರು ಅನುಕಂಪದ ಅಲೆಯಲ್ಲಿ ಆಯ್ಕೆಯಾದವರು ಅನ್ನೋದು ಗಮನಿಸಬೇಕಾದ ಸಂಗತಿ. ಪತಿ ಕೈ ಬಾಯಿ ಶುದ್ಧವಿದ್ದರೆ, ಅದಕ್ಕೆ ತದ್ವಿರುದ್ಧ ಈ ಮಹಾತಾಯಿ!

ಪವರ್ ಟಿವಿ ಬೇಟೆ ಚಾಪ್ಟರ್ 3ರಲ್ಲಿ ಸ್ವತಃ ತಾವೇ ಲಂಚ ಪಡೆಯುವ ಮೂಲಕ 28ನೇ ಬೇಟೆಯಾಗಿ ಸಿಕ್ಕಿಬಿದ್ದ ಕುಂದಗೋಳ ಕ್ಷೇತ್ರದ ‘ಕೈ’ ಶಾಸಕಿ. ಕುಂದಗೋಳ ಕ್ಷೇತ್ರದ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧವಾಗಿ ಪವರ್ ಟಿವಿ ತಂಡದ ಜೊತೆಗೆ ಲಂಚದ ಮಾತುಕತೆ ನಡೆಸಿದ್ದಾರೆ.

ಕುಸುಮಾವತಿ ಶಿವಳ್ಳಿ ಅವರು, ಹುಬ್ಬಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ನಮ್ಮ ಸ್ಟಿಂಗ್ ತಂಡದ ಜೊತೆ ಡೀಲ್ ಮಾತುಕತೆ ನಡೆಸಿದ್ದಾರೆ. ಚಾಲಾಕಿಯಾಗಿ ಮಾತನಾಡುವ ಶಾಸಕಿ ಎಲ್ಲರಿಗೂ ಏನು ಕೊಡ್ತೀರೋ ಅದನ್ನೇ ನಮಗೂ ಕೊಡಿ ಎಂದು ನಯವಾಗಿ ಮಾತನಾಡುತ್ತಳೇ ಡೀಲ್ ಕುದುರಿಸಿದ್ದಾರೆ. ಫೈನಲ್ಲಾಗಿ ಕಿಲೋಮೀಟರ್​ಗೆ 1 ಲಕ್ಷ ನೀಡುವಂತೆ ಒಪ್ಪಿಕೊಳ್ಳುವ ಕುಸುಮಾವತಿ ಶಿವಳ್ಳಿ, ಸ್ವತಃ ತಾವೇ ಒಂದು ಲಕ್ಷ ರೂಪಾಯಿ ಲಂಚದ ಹಣ ಪಡೆದಿದ್ದಾರೆ. ಶಾಸಕಿ ಕುಸುಮಾ ಶಿವಳ್ಳಿ ಲಂಚ ಪುರಾಣದ ವಿಡಿಯೋ ಇದೀಗ ಪವರ್ ಟಿವಿಯ ಸ್ಟಿಂಗ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೆಸರು: ಕುಸುಮಾವತಿ ಶಿವಳ್ಳಿ

ಪಕ್ಷ: ಕಾಂಗ್ರೆಸ್

ಕ್ಷೇತ್ರ: ಕುಂದಗೋಳ

ಜಿಲ್ಲೆ: ಧಾರವಾಡ

ಸ್ಥಳ: ಶಾಸಕರ ನಿವಾಸ, ಹುಬ್ಬಳ್ಳಿ

ಲಂಚ: 1 ಲಕ್ಷ ರೂಪಾಯಿ

 

Exit mobile version