Site icon PowerTV

ಕನ್ನಡಿಗರಿಗೆ ಜಯ : ನಂದಿನಿ ಮೇಲಿನ ‘ದಹಿ’ ಹಿಂದಿ ಬಳಕೆ ಆದೇಶ ವಾಪಸ್

ಬೆಂಗಳೂರು : ನಂದಿನಿ ಕನ್ನಡಿಗರದ್ದು.. ನಂದಿನಿ ಪ್ರೋ ಬಯೋಟಿಕ್ ಮೊಸರು ಪ್ಯಾಕೆಟ್ ಮೇಲೆ ‘ದಹಿ’ ಎಂದು ಹಿಂದಿಯಲ್ಲಿ ಮುದ್ರಿಸಿರುವುದರ ವಿರುದ್ಧ ಆಕ್ರೋಶ ಹೊರಹಾಕಿರುವ ಕನ್ನಡಿಗರಿಗೆ ಕೊನೆಗೂ ಜಯವಾಗಿದೆ. ನಂದಿನಿ ಮೊಸರು ಪ್ಯಾಕೆಟ್ ಮೇಲೆ ಮುದ್ರಿಸುವ ‘ದಹಿ’ ಪದದ ಆದೇಶವನ್ನು ವಾಪಸ್ ಪಡೆಯಲಾಗಿದೆ.

ಹೌದು, ನಂದಿನಿ ಮೇಲೆ ಹಿಂದಿಯಲ್ಲಿ  ‘ದಹಿ’ ಎಂದು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಕೆಎಂಎಫ್ ಗೆ ಆದೇಶಿಸಿತ್ತು. ಹಿಂದಿ ಹೇರಿಕೆ ಒಪ್ಪಲು ಸಾಧ್ಯವಿಲ್ಲ ಎಂದು ಕನ್ನಡಿಗರು ಕಿಡಿಕಾರಿದ್ದಾರೆ.

ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸರಣಿ ಟ್ವಿಟ್ ಮೂಲಕ ಆಕ್ರೋಶ ಹೊರಹಾಕಿದ್ದರು. ದಕ್ಷಿಣ ಭಾರತದ ಮೇಲೆ ನಡೆಯುತ್ತಿರುವ ಹಿಂದಿ ಹೇರಿಕೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಬಿಜೆಪಿ ಎಚ್ ಡಿಕೆ ವಿರುದ್ಧ ವಾಗ್ದಾಳಿ

ರಾಜ್ಯದ 6.5 ಕೋಟಿ ಕನ್ನಡಿಗರ ಮನೋಭಾವಕ್ಕೆ ವಿರುದ್ಧವಾಗಿ ದಹಿ ಎನ್ನುವ ಪದವನ್ನು ಮುದ್ರಿಸಿದ್ದೇ ಕೆಎಂಎಫ್ ಮಾಡಿರುವ ದೊಡ್ದ ತಪ್ಪು. ಇದು ರಾಜ್ಯ ಬಿಜೆಪಿ ಸರ್ಕಾರದ ಗಮನಕ್ಕೆ ಬಾರದೆ ಆಗಿರುವ ಕೃತ್ಯವಲ್ಲ. ಕಾಣದ ಕೈಗಳ ಕಳ್ಳಾಟ ಇಲ್ಲಿ ಸ್ಪಷ್ಟ ಎಂದು ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಹಿಂದಿ ಭಾಷೆಯ ‘ದಹಿ’ ಪದ ಬಳಕೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಕೂಡ ಇತ್ತು. ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಎಫ್.ಎಸ್.ಎಸ್.ಎ.ಐ ತನ್ನ ಆದೇಶವನ್ನು ಹಿಂಪಡೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ನಂದಿನಿ ಪ್ರೋ ಬಯೋಟಿಕ್ ಮೊಸರು ಪ್ಯಾಕೆಟ್ ಮೇಲೆ ಇಂಗ್ಲಿಷ್ ನ ‘ಕರ್ಡ್’ ಜೊತೆ ಪ್ರಾದೇಶಿಕ ಭಾಷೆ ಬಳಕೆಗೆ ಅವಕಾಶ ನೀಡಿದೆ.

Exit mobile version