Site icon PowerTV

ನೀತಿ ಸಂಹಿತೆ ಜಾರಿಯಾದರೆ ಏನಾಗುತ್ತೆ?

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ಪ್ರಕಟವಾಗಿದೆ. ಇಂದು ಕೇಂದ್ರ ಚುನಾವಣಾ ಆಯೋಗ ದೆಹಲಿಯ ವಿಜ್ಞಾನ ಭವನದಲ್ಲಿ ಬೆಳಗ್ಗೆ 11.30ಕ್ಕೆ ಚುನಾವಣೆಯನ್ನು ಘೋಷಣೆ ಮಾಡಲಿದೆ. ಬಳಿಕ ನೀತಿ ಸಂಹಿತೆ ಜಾರಿಯಾಗಿಲಿದೆ.

ಹಾಗಿದ್ರೆ, ನೀತಿ ಸಂಹಿತೆ ಜಾರಿಯಾದರೆ ಏನಾಗುತ್ತೆ? ಯಾವುದಕ್ಕೆ ವಿನಾಯಿತಿ ಇರುತ್ತದೆ? ಕರ್ನಾಟಕದ ಮತದಾರರ ಸಂಖ್ಯೆ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

  1. ಚುನಾವಣೆಗೆ ದಿನಾಂಕ ಘೋಷಣೆ ದಿನದಿಂದ ಮತ ಎಣಿಕೆ ಮುಗಿಯೋವರೆಗೆ ನೀತಿ ಸಂಹಿತೆ ಜಾರಿ
  2. ಎಲ್ಲಾ ರಾಜಕೀಯ ಪಕ್ಷಗಳಿಗೂ ಚುನಾವಣಾ ನೀತಿ ಸಂಹಿತೆ ಅನ್ವಯ
  3. ಸರ್ಕಾರದ ಎಲ್ಲಾ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ ಮಂಡಳಿಗಳು
  4. ಸ್ಥಳೀಯ ಪೌರ ಸಂಸ್ಥೆಗಳು, ಸರ್ಕಾರದಿಂದ ಹಣಕಾಸಿನ ನೆರವು ಪಡೆಯುವ ಸಂಸ್ಥೆಗಳು
  5. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನೀತಿ ಸಂಹಿತೆ ವ್ಯಾಪ್ತಿಗೆ ಬರ್ತಾರೆ
  6. ಸರ್ಕಾರ ಹೊಸ ಯೋಜನೆ ಘೋಷಿಸುವಂತಿಲ್ಲ
  7. ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವಂತಿಲ್ಲ
  8. ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ
  9. ಹೊಸ ಯೋಜನೆಗೆ ಹಣ ನೀಡುವಂತಿಲ್ಲ, ಹೊಸ ಟೆಂಡರ್ ಕರೆಯುವಂತಿಲ್ಲ
  10. ಈಗಾಗಲೇ ಕರೆದಿದ್ದ ಟೆಂಡರ್ ಫೈನಲ್ ಕೂಡಾ ಮಾಡೋ ಹಾಗಿಲ್ಲ
  11. ಸಚಿವರು, ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ
  12. ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು
  13. ಯಾವುದೇ ಧಾರ್ಮಿಕ ಸ್ಥಳಗಳು ಚುನಾವಣಾ ಪ್ರಚಾರಕ್ಕೆ ಬಳಕೆ ಆಗಬಾರದು
  14. ಧರ್ಮ, ಜಾತಿ ವಿಷಯಾಧಾರಿತವಾಗಿ ಮತ ಕೇಳುವಂತೆಯೇ ಇಲ್ಲ

ಯಾವುದಕ್ಕೆ ವಿನಾಯ್ತಿ?

  1. ನೀರಾವರಿ, ಲೋಕೋಪಯೋಗಿ ಯೋಜನೆಗಳ ಕಾರ್ಯ ಪ್ರಗತಿಯಲ್ಲಿದ್ದರೆ ಮುಂದುವರೆಸಬಹುದು
  2. ನೀತಿ ಸಂಹಿತೆ ಪ್ರಕಾರ ಯಾವುದೇ ಅಡ್ಡಿ ಇಲ್ಲ
  3. ಇದಲ್ಲದೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಜಾರಿಯಲ್ಲಿರುವ ಕಾರ್ಯಕ್ರಮ ಮುಂದುವರೆಸಬಹುದು
  4. ಆದ್ರೆ, ಈ ಕಾರ್ಯಕ್ರಮಗಳಿಗೆ ಹೊಸ ಫಲಾನುಭವಿಗಳನ್ನ ಆಯ್ಕೆ ಮಾಡುವಂತಿಲ್ಲ
  5. ರಾಜ್ಯ ಸರ್ಕಾರ ಸಂಪುಟ ಸಭೆ ನಡೆಸಬಹುದು, ಆದ್ರೆ, ಯಾವುದೇ ನಿರ್ಣಯ ಕೈಗೊಳ್ಳಬಾರದು!
  6. ಕುಡಿಯುವ ನೀರು ಪೂರೈಕೆ ಮಾಡೋದಕ್ಕೆ, ಗೋ ಶಾಲೆ ತೆರೆಯೋಕೆ ನೀತಿ ಸಂಹಿತೆ ಅಡ್ಡಿ ಆಗಲ್ಲ
  7. ಆದ್ರೆ, ಎಲ್ಲದಕ್ಕೂ ಚುನಾವಣಾ ಆಯೋಗದ ಅನುಮತಿ ಬೇಕೇ ಬೇಕು

 

ಪ್ರಸ್ತುತ ವಿಧಾನಸಭೆ ಬಲಾಬಲ

ಬಿಜೆಪಿ-119

ಕಾಂಗ್ರೆಸ್​-69

ಜೆಡಿಎಸ್​-29

ಒಟ್ಟು-224

ಕರ್ನಾಟಕ ಮತದಾರರು

  1. ಒಟ್ಟು ಮತದಾರರು-5.21 ಕೋಟಿ
  2. ಪುರುಷ ಮತದಾರರು-2.62 ಕೋಟಿ
  3. ಮಹಿಳಾ ಮತದಾರರು-2.59 ಕೋಟಿ
  4. ಒಟ್ಟು ಮತಗಟ್ಟೆಗಳು-58,282
  5. ನಗರ ಪ್ರದೇಶದ ಮತಗಟ್ಟೆ-24,063
  6. ಗ್ರಾಮೀಣ ಪ್ರದೇಶದ ಮತಗಟ್ಟೆ-34,219
Exit mobile version