Site icon PowerTV

ಪವರ್ ಬೇಟೆ ನಂ.14 : ಲಂಚದ ‘ಮಧು’ ಹೀರಿದ ಮಧುಗಿರಿ ಜೆಡಿಎಸ್ ಶಾಸಕ

ಬೆಂಗಳೂರು : ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 14ನೇ ಬೇಟೆ ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ವಿ ವೀರಭದ್ರಯ್ಯ.

ಹೌದು, ಈ ಆಸಾಮಿಗೆ ಮಾಜಿ ಐಎಎಸ್ ಅಧಿಕಾರಿ ಎಂಬ ಹಣೆಪಟ್ಟಿ ಬೇರೆ ಇದೆ. ಸರ್ಕಾರಿ ಕೆಲಸ ದೇವರ ಕೆಲಸ ಎಂದು ತನ್ನ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಗೆ ಬೋಧನೆ ಮಾಡಿದ್ದ, ಇಂದು ಸದ್ದು-ಗದ್ದಲವಿಲ್ಲದೆ ಲಂಚದ ಮಧು ಹೀರಿದ್ದಾರೆ.

ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ನಾಲ್ಕು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಪ್ರತೀ ಕಿಲೋಮೀಟರ್​ಗೆ ತಲಾ 1 ಲಕ್ಷ ರೂಪಾಯಿಯಂತೆ ಫೈನಲ್ ಆಗಿ 4 ಲಕ್ಷಕ್ಕೆ ಒಪ್ಪಿಗೆ ನೀಡಿದ್ದಾರೆ.

ಆರಾಮಾಗಿ ಕೆಲಸ ಮುಗಿಸಿ

ಬೆಂಗಳೂರಿನ ಖಾಸಗಿ ಹೋಟೆಲ್​​​ನಲ್ಲಿ ಮಧುಗಿರಿ ಶಾಸಕ ವೀರಭದ್ರಯ್ಯ ಪವರ್ ಟಿವಿ ತಂಡದ ಜೊತೆಗೆ ಡೀಲ್ ಮಾತುಕತೆ ನಡೆಸಿದ್ದರು. ಮಧುಗಿರಿ ಪಟ್ಟಣದಲ್ಲಿ ಓಎಫ್​ಸಿ ಕೇಬಲ್​ ಅಳವಡಿಕೆಗೆ 1 ಲಕ್ಷ ರೂಪಾಯಿಗೆ ಶಾಸಕ ವೀರಭದ್ರಯ್ಯ ಡೀಲ್ ಕುದುರಿಸಿದ್ದು, ಪ್ರತೀ ಕಿಲೋಮೀಟರ್​ಗೆ ತಲಾ 1 ಲಕ್ಷ ರೂಪಾಯಿಯಂತೆ 4 ಲಕ್ಷ ರೂಪಾಯಿಗೆ ಒಪ್ಪಿಕೊಂಡಿದ್ದರು. ಖುದ್ದು ಶಾಸಕರೇ 1 ಲಕ್ಷ ಲಂಚವನ್ನು ಸೈಲೆಂಟ್ ಆಗಿಯೇ ಜೇಬಿಗಿಳಿಸಿದ್ದಾರೆ. ಬಳಿಕ ಆರಾಮಾಗಿ ನಿಮ್ಮ ಕೆಲಸ ಮಾಡಿಕೊಳ್ಳಿ ಎಂದು ಪವರ್ ಟಿವಿ ತಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಶಾಸಕ ಎಂ.ವಿ ವೀರಭದ್ರಯ್ಯ ಐಎಎಸ್ ಅಧಿಕಾರಿಯಾಗಿದ್ದರು. 2013ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಎಂ. ವಿ. ವೀರಭದ್ರಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮಧುಗಿರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಹೆಸರು: ವೀರಭದ್ರಯ್ಯ

ಪಕ್ಷ: ಜೆಡಿಎಸ್

ಕ್ಷೇತ್ರ: ಮಧುಗಿರಿ

ಜಿಲ್ಲೆ: ತುಮಕೂರು

ಸ್ಥಳ: ಖಾಸಗಿ ಹೋಟೆಲ್, ಬೆಂಗಳೂರು

Exit mobile version