Site icon PowerTV

ಪವರ್ ಬೇಟೆ ನಂ. 15 : ಕೊಳ್ಳೇಗಾಲದಲ್ಲಿ ‘ಲಕ್ಷ’ ಕೊಳ್ಳೆ ಹೊಡೆದ ‘ಕೈ’ ಶಾಸಕ

ಬೆಂಗಳೂರು : ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ತಗ್ಲಾಕ್ಕೊಂಡ 15ನೇ ಬೇಟೆ ಚಾಮರಾಜನಗರ ಜಿಲ್ಲೆ ಹನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್. ನರೇಂದ್ರ.

ಹೌದು, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಶಾಸಕ ನರೇಂದ್ರ ಡೀಲ್ ಕುದುರಿಸಿರುವ ಲಂಚಾವತಾರ ರಾಜ್ಯದ ಜನತೆ ಮುಂದೆ ಬಟಾ ಬಯಲಾಗಿದೆ.

ಪವರ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿಯೇ ಶಾಸಕ ಆರ್. ನರೇಂದ್ರ ಸಿಕ್ಕಿಬಿದ್ದಿದ್ದಾರೆ. ಹನೂರು ಶಾಸಕ ನರೇಂದ್ರ ಅಡ್ಡಾಕ್ಕೇ ‘ಪವರ್’ ತಂಡದ ಭೇಟಿ  ನೀಡಿತ್ತು. ಕೊಳ್ಳೆಗಾಲದಲ್ಲಿರುವ ತಮ್ಮ ಮನೆಯಲ್ಲಿ ಲಂಚದ ಬಗ್ಗೆ ಶಾಸಕ ಬರೇಂದ್ರ ಬಿಂದಾಸ್ ಆಗಿಯೇ ಮಾತುಕತೆ ನಡೆಸಿದ್ದರು.

1 ಲಕ್ಷಕ್ಕೆ ಡೀಲ್​ ಕುದುರಿಸಿದ ಶಾಸಕ ನರೇಂದ್ರ

ಓಎಫ್​ಸಿ ಕೇಬಲ್ ಅಳವಡಿಕೆಗೆ ಪ್ರತೀ ಕಿಲೋಮೀಟರ್​ಗೆ 1 ಲಕ್ಷಕ್ಕೆ ಶಾಸಕ ನರೇಂದ್ರ ಡೀಲ್​ ಕುದುರಿಸಿದ್ದರು. ನೇರವಾಗಿ, ಮುಚ್ಚುಮರೆ ಇಲ್ಲದೆ ನರೇಂದ್ರ 1 ಲಕ್ಷ ರೂ. ಅಡ್ವಾನ್ಸ್ ಪಡೆದಿದ್ದಾರೆ. ನರೇಂದ್ರ ಲಂಚ ಪುರಾಣ ಇದೀಗ ಪವರ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಬಟಾ ಬಯಲಾಗಿದೆ. ಇಂಥ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳಿಸಿದ್ದು ನಾವಾ? ಎಂದು ಹನೂರು ಕ್ಷೇತ್ರದ ಜನತೆ ಆಕ್ರೋಶ ಹೊರಹಾಕಿದ್ದಾರೆ.

ಹೆಸರು: ನರೇಂದ್ರ

ಪಕ್ಷ: ಕಾಂಗ್ರೆಸ್

ಕ್ಷೇತ್ರ: ಹನೂರು

ಜಿಲ್ಲೆ: ಚಾಮರಾಜನಗರ

ಸ್ಥಳ: ಶಾಸಕರ ನಿವಾಸ, ಕೊಳ್ಳೇಗಾಲ

Exit mobile version