Site icon PowerTV

ಪವರ್ ಬೇಟೆ ನಂ.17 :’ಮಂಚ’ದ ಮೇಲೆ ‘ಲಂಚ’ ಮೂಸಿದ ಮಾಲೂರು ಶಾಸಕ

ಬೆಂಗಳೂರು : ಪವರ್ ಟಿವಿ ಮುಂದಿನ ಬೇಟೆ ಸಾಗಿದ್ದು ಕೆಜಿಎಫ್ ಅಡ್ಡಾದ ಕಡೆ. ಹೇಳಿ ಕೇಳಿ ಕೋಲಾರ ಚಿನ್ನದ ಗಣಿ. ಲಂಚ ಮೂಸೋದ್ರಲ್ಲಿ ಇಲ್ಲಿಯ ನಾಯಕರು ಬೇರೆಯವರಿಗಿಂತ ಮುಂದೆ ಹಾಗೂ ತುಂಬಾ ಸ್ಟ್ರಿಕ್ಟ್!

ಹೌದು, ನಮ್ಮ ಮುಂದಿನ ಬೇಟೆ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ. ಪವರ್ ಟಿವಿ ಮೆಗಾ ಬೇಟೆಯಲ್ಲಿ ಬೆಂಗಳೂರಿನ ಶಾಸಕರ ಭವನದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 17ನೇ ಶಾಸಕ ಇವರೇ ನೊಡಿ.

ಪವರ್ ಟಿವಿ ರಹಸ್ಯ ಕಾರ್ಯಾಚರಣೆ ವೇಳೆ ಶಾಸಕ ನಂಜೇಗೌಡರ ಲಂಚಾವತಾರ ರೆಡ್ ಹ್ಯಾಂಡ್ ಆಗಿ ಅನಾವರಣಗೊಂಡಿದೆ. ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಪ್ರತೀ ಕಿಲೋಮೀಟರ್​ಗೆ ಒಂದೂವರೆ ಲಕ್ಷ ರೂಪಾಯಿ ಲಂಚ ನೀಡುವಂತೆ ಪವರ್ ಟಿವಿ ಪ್ರತಿನಿಧಿ ಬಳಿ ಬೇಡಿಕೆ ಇಟ್ಟಿದ್ದರು.

ಲಂಚ ಪಡೆಯೋದ್ರಲ್ಲಿ ನಂಜೇಗೌಡ್ರು ಸ್ಟ್ರಿಕ್ಟ್!

ಮಾಲೂರು ಶಾಸಕ ನಂಜೇಗೌಡ್ರು ಲಂಚ ಪಡೆಯೋದ್ರಲ್ಲಿ ತುಂಬಾನೇ ಸ್ಟ್ರಿಕ್ಟ್. ನನಗೆ ಇಷ್ಟೇ ಬೇಕು ಅಂತಾ ಕೇಳಿ ಶಿಸ್ತಾಗಿ ಅಷ್ಟೇ ಲಂಚ ಪಡೆದಿದ್ದಾರೆ. ಪ್ರತೀ ಕಿಲೋಮೀಟರ್​ ಓಎಫ್​ಸಿ ಕೇಬಲ್​​ ಅಳವಡಿಕೆಗೆ ಒಂದೂವರೆ ಲಕ್ಷಕ್ಕೆ ಡೀಲ್ ಕುದುರಿಸಿದ್ದರು. ಮಂಚದ ಮೇಲೆ ಹಣ ಇಡುವಂತೆ ಸೂಚಿಸಿ, ಅಡ್ವಾನ್ಸ್ ಆಗಿ ಒಂದೂವರೆ ಲಕ್ಷ ರೂಪಾಯಿ ಜೇಬಿಗಿಳಿಸಿದ್ದಾರೆ.

 

ಹೆಸರು: ಕೆ.ವೈ ನಂಜೇಗೌಡ

ಪಕ್ಷ: ಕಾಂಗ್ರೆಸ್

ಕ್ಷೇತ್ರ: ಮಾಲೂರು

ಪಕ್ಷ : ಕಾಂಗ್ರೆಸ್

ಜಿಲ್ಲೆ: ಕೋಲಾರ

ಸ್ಥಳ: ಶಾಸಕರ ಭವನ, ಬೆಂಗಳೂರು

Exit mobile version