Site icon PowerTV

ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್ ದಿಢೀರ್ ಲ್ಯಾಂಡ್ : ಕೆಲಕಾಲ ಆತಂಕ

ಬೆಂಗಳೂರು : ಬಿಜೆಪಿ ನಾಯಕರ ಹೆಲಿಕಾಪ್ಟರ್ ಲ್ಯಾಂಡ್ ಹಾಗೂ ಟೇಕ್ ಆಫ್ ವಿಷಯ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಲಿಕಾಪ್ಟರ್ ಲ್ಯಾಂಡ್ ವೇಳೆ ಕೆಲಕಾಲ ಆತಂಕ ಮೂಡಿಸಿತ್ತು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಇದ್ದ ಹೆಲಿಕಾಪ್ಟರ್ ಸಹ ಅದೇ ರೀತಿ ಆಗಿದೆ.

ಹೌದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಟೇಕ್ ಆಫ್​ ಆಗಿ ಮತ್ತೆ ಲ್ಯಾಂಡ್​​ ಆಗಿರುವ ಘಟನೆ ಚಿಕ್ಕಬಳ್ಳಾಪುರದ ಎಸ್​ಜೆಸಿಐಟಿ ಹೆಲಿಪ್ಯಾಡ್​ನಲ್ಲಿ ನಡೆದಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಮೂಡಿತ್ತು.

ಎಸ್​ಜೆಸಿಐಟಿ ಹೆಲಿಪ್ಯಾಡ್​ನಲ್ಲಿ ಧೂಳಿನಿಂದ ಆಕಾಶ ಕಾಣಿಸದಂತಾದ ಹಿನ್ನಲೆ ಮತ್ತೆ ಲ್ಯಾಂಡಿಂಗ್ ಮಾಡಲಾಗಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್​ ನೋಡಿ ಆತಂಕಗೊಂಡ ಪೊಲೀಸರು ಕೂಡಲೆ ಸ್ಥಳಕ್ಕೆ ಧಾವಿಸಿದರು. ಆದರೆ, ಬಳಿಕ ಮತ್ತೊಮ್ಮೆ ಟೇಕ್ ಆಫ್​ ಆಗಿ ಹೆಲಿಕಾಪ್ಟರ್​ ಹಾರಾಟ ನಡೆಸಿದೆ.

ಸಿಎಂ, ಸುಧಾಕರ್ ಪ್ರಯಾಣ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ. ಕೆ ಸುಧಾಕರ್​ ರಾಮನಗರಕ್ಕೆ ಹೆಲಿಕಾಪ್ಟರ್​ ನಲ್ಲಿ ತೆರಳುತ್ತಿದ್ದರು. ಟೇಕ್​ ಆಫ್​ ಆಗುವ ಸಮಯದಲ್ಲಿ ಹೆಲಿಕಾಪಟ್ಟರ್​ ಪ್ಯಾನ್​​ ಗಾಳಿಯಿಂದ ದೂಳು ಎದ್ದಿದೆ. ಆಕಾಶ ಕಾಣದ ಹಿನ್ನೆಲೆ ಮತ್ತೆ ಲ್ಯಾಂಡ್​ ಮಾಡಲಾಗಿದೆ.

Exit mobile version