Site icon PowerTV

ದೇವೇಗೌಡ್ರಿಗೆ ರೆಡಿಯಾಗಿದೆ ಪುಲಿಕೇಶಿ ಪೇಟ : ಗಿನ್ನಿಸ್ ದಾಖಲೆ ಎಂದ ಕುಮಾರಣ್ಣ

ಬೆಂಗಳೂರು : ಜೆಡಿಎಸ್ ಪಂಚರತ್ನಯಾತ್ರೆ ಸಮಾರೋಪ ಸಮಾರಂಭ ಇಂದು ಮೈಸೂರಿನ ಚಾಮುಂಡಿ ತಪ್ಪಲಿನಲ್ಲಿ ಅದ್ದೂರಿಯಾಗಿ ನೆರವೇರಲಿದೆ. ವಿಶೇಷವೆಂದರೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರಿಗೆ ಇಮ್ಮಡಿ ಪುಲಿಕೇಶಿ ಧರಿಸುತ್ತಿದ್ದ ಮಾದರಿಯ ಪೇಟ ತೊಡಿಸಲಾಗುತ್ತದೆ. 

ಹೌದು, ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ಜೆಡಿಎಸ್ ಪಂಚರತ್ನ ಯಾತ್ರೆ ರಾಜ್ಯದಲ್ಲಿ ಸಂಚಲ ಸೃಷ್ಟಿಸಿದೆ. ಮೈಸೂರಿನಲ್ಲಿ ಇಂದು ನಡೆಯುವ ಸಮಾರೋಪದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ತಮ್ಮ ಅನಾರೋಗ್ಯದ ನಡುವೆ ಭಾಗವಹಿಸುತ್ತಿದ್ದಾರೆ.

ದೇವೇಗೌಡರ ಆಗಮನವು ಜೆಡಿಎಸ್ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ದೇವೇಗೌಡ ಅವರು ಮಧ್ಯಾಹ್ನ 3ಗಂಟೆಗೆ ಮೈಸೂರಿಗೆ ಆಗಮಿಸಲಿದ್ದು ಕೆ.ಆರ್.ಎಸ್, ಹಿನಕಲ್, ಬೋಗಾದಿ, ಶ್ರೀರಾಂಪುರ ಮಾರ್ಗವಾಗಿ ರಿಂಗ್ ರಸ್ತೆಯಲ್ಲಿ ರೋಡ್‌ಶೋ ನಡೆಸಲಿದ್ದಾರೆ.

ಸ್ವರ್ಣಲೇಪಿತ ನೇಗಿಲು, ಪೇಟ

ಇನ್ನು ಎಚ್.ಡಿ.ದೇವೇಗೌಡರಿಗೆ ವಿಶಿಷ್ಟ ಸ್ಮರಣಿಕೆಯಾಗಿ ಸ್ವರ್ಣಲೇಪಿತ ನೇಗಿಲು ನಿಡಲಾಗುತ್ತದೆ. ಜೊತೆಗೆ, ಇಮ್ಮಡಿ ಪುಲಕೇಶಿ ಮಾದರಿಯ ಪೇಟ ತಯಾರು ಮಾಡಲಾಗಿದೆ. ಜೆಡಿಎಸ್ ಕಾರ್ಯಕರ್ತ ಸತೀಶ್‌ಗೌಡ ಅವರಿಂದ ದೇವೇಗೌಡರಿಗೆ ಈ ಗಿಫ್ಟ್ ನೀಡಲಾಗುತ್ತಿದೆ. ಮೈಸೂರಿನ ಕಲಾವಿದ ನಂದನ್ ಸಿಂಗ್ಈ ಪೇಟ ರೆಡಿ ಮಾಡಿದ್ದಾರೆ. ಇಂದಿನ ಸಮಾರಂಭದಲ್ಲಿ ದೇವೇಗೌಡರಿಗೆ ಕಾರ್ಯಕರ್ತರು ಪೇಟ ತೊಡಿಸಿ ಬರಮಾಡಿಕೊಳ್ಳಲಿದ್ದಾರೆ.

ಇನ್ನೂ, ಸಮಾರಂಭದಲ್ಲಿ ಸುಮಾರು ಹತ್ತು ಲಕ್ಷ ಜನ ಸಮಾವೇಶಕ್ಕೆ ಬರುವ ನಿರೀಕ್ಷೆಯಿದೆ. ಬೃಹತ್ ವೇದಿಕೆ ಸಮಾವೇಶಕ್ಕೆ ಸಜ್ಜಾಗಿದ್ದು, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವೇದಿಕೆ ಸಿದ್ಧತೆ ಕಾರ್ಯ ಪರಿಶೀಲನೆ ಮಾಡಿದ್ದಾರೆ. ಈ ಸಮಾರಂಬ ಗಿನ್ನಿಸ್ ದಾಖಲೆ ತಲುಪಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version