Site icon PowerTV

ರಮ್ಯಾ ಮಹಾ ಎಡವಟ್ಟು : ಪದ್ಮಾವತಿ ನಡೆಗೆ ನೆಟ್ಟಿಗರು ಕಿಡಿ

ಬೆಂಗಳೂರು : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಂದನವನಕ್ಕೆ ಎಂಟ್ರಿ ಕೊಟ್ಟು ಬರೋಬ್ಬರಿ 20 ವರ್ಷ. ಎರಡು ದಶಕಗಳಿಂದ ರಮ್ಯಾ ಪ್ರೇಕ್ಷಕರನ್ನು ರಂಜಿಸಿ, ಹಿರೋ ಲೆವೆಲ್ ನೇಮ್, ಫೇಮ್ ಮಾಡಿದ್ದಾರೆ. ಇದೀಗ, ಸಾಧಕರ ಸೀಟ್ ನಲ್ಲಿ ಕುಳಿತು ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಸಾಕಷ್ಟು ವಿಚಾರಗಳ್ನು ಬಿಚ್ಚಿಟ್ಟಿದ್ದಾರೆ.

ಹೌದು, ಸಾಧಕಿಯ ಸ್ಥಾನ ಅಲಂಕರಿಸಿರುವ ರಮ್ಯಾ ಎಲ್ಲೂ ಹೇಳಿರದ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿರುವುದು ಅವರ ಅಭಿಮಾನಿಗಳಿಗೆ ಸಂತಸವಾಗಿದೆ. ಆದರೆ, ರಮ್ಯಾ ಈ ಶೋನಲ್ಲಿ ಮಾಡಿರುವ ಮಹಾ ಎಡವಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಶೋ ಹಾಲಿವುಡ್ ತಲುಪಿದೆಯೇ?

5ನೇ ಸೀಸನ್‌ ಮೊದಲ ಅತಿಥಿಯಾಗಿ, ನಟಿ ರಮ್ಯಾ ಪಾಲ್ಗೊಂಡಿದ್ದರು. ಆದರೆ, ಇಡೀ ಕಾರ್ಯಕ್ರಮದಲ್ಲಿ ರಮ್ಯಾ ಕನ್ನಡ ಮಾತನಾಡಿದ್ದು ಬಹಳ ಕಡಿಮೆ. ಇದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮ ಈಗ ಹಾಲಿವುಡ್ ತಲುಪಿದೆಯೇ? ಎಂದು ನೆಟ್ಟಿಗರು ಖಾರವಾಗಿ ಪ್ರಶ್ನಿಸಿದ್ದಾರೆ.

‘ಹಾಲಿವುಡ್ ನಟಿ ರಮ್ಯಾ ಅವರ ಇಂಗ್ಲಿಷ್ ಕೇಳೋಕೆ ಚಂದ, ಆದರೂ, ಅಲ್ಲಲ್ಲಿ ಕನ್ನಡ ಬಳಸಿರುವುದು ಕನ್ನಡಿಗರು ಹೆಮ್ಮೆ ಪಡುವ ಸಂಗತಿಯೇ ಸರಿ’ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಇನ್ನೂ ಹಲವರು ‘ನಾನಂತೂ ಜೀ ಇಂಗ್ಲಿಷ್ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡ್ತಾ ಇದ್ದೀನಿ.. ನೀವು..?’ ಎಂದು ರಮ್ಯಾ ಅವರ ಕಾಲೆಳೆದಿದ್ದಾರೆ.

ನೀವಾದ್ರೂ ಕನ್ನಡ ಹೇಳಿಕೊಡಿ

‘ಇದು ಕನ್ನಡ ಪ್ರೋಗ್ರಾಂ ಹಾ.. ಇಲ್ಲ ಇಂಗ್ಲಿಷ್ ಪ್ರೋಗ್ರಾಂ ಹಾ.. ಒಂದು ಗೊತ್ತಾಗ್ಲಿಲ್ಲ. ಇಂಗ್ಲಿಷ್ ನಲ್ಲಿ ರಮಸಿಕ್ಕಾ ಮಂಗನ್ (ರಶ್ಮಿಕಾ ಮಂದಣ್ಣ) ಗೆ ಟಕ್ಕರ್ ಕೊಟ್ಟವರೇ ರಮ್ಯಾ ಅವ್ರು. ರಮೇಶ್ ಸರ್ ನೀವಾದ್ರೂ ಬಂದವರಿಗೆ ಕನ್ನಡ ಹೇಳಿಕೊಡಿ. ರಾಘವೇಂದ್ರ ಹುಣಸೂರ್ ಅವರೇ ದಯವಿಟ್ಟು ಪ್ರೋಗ್ರಾಂ ನಿಲ್ಲಿಸಿ, ಇಲ್ಲಂದ್ರೆ ಕನ್ನಡ ದಲ್ಲಿ ಮಾತಾಡಿಸಿ’ ಎಂದು ಕಾಮೆಂಟ್ ಹರಿಬಿಟ್ಟಿದ್ದಾರೆ.

ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಗೆ ಸೇರಿಸ್ತೀನಿ

ಇನ್ನೂ ಕೆಲವರು, ‘ವೀಕೆಂಡ್ ವಿಥ್ ರಮೇಶ್’ ಶೋಗೆ ಆ.. ಸ್ವಾಮೀಜಿ ಬೇರೆ ಬರ್ತಾರಂತೆ. ಅವರ ಆಂಗ್ಲ ಸಂಚಿಕೆಯನ್ನು ನೋಡಬೇಕಾಗಿದೆ. ಈಗಲೇ ನಮ್ಮ ತಾಯಿ ಹಾಗೂ ಅಜ್ಜಿಯನ್ನು ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಗೆ ಸೇರಿಸುತ್ತೇನೆ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಟ್ನಲ್ಲಿ, ವೀಕೆಂಡ್ ವಿತ್ ರಮೇಶ್ ಸೀಸನ್ 5 ಶೋದಲ್ಲಿ ರಮ್ಯಾ ಸೀರೆಯುಟ್ಟು ವೇದಿಕೆ ಮೇಲೆ ಬರುತ್ತಿದ್ದಂದೆ ಅಭಿಮಾನಿಗಳು ಫಿದಾ ಆಗಿದ್ದರು. ಇತ್ತ ನೆಚ್ಚಿನ ನಟಿ ಸಾಗಿಬಂದ ಜೀವನ ಪಯಣವನ್ನು ತಿಳಿದುಕೊಳ್ಳಲು ಕಾತರದಿಂದ ಕಾದು ಕೂತಿದ್ರು. ಆದರೆ, ರಮ್ಯಾ ಅವರ ಇಂಗ್ಲಿಷ್ ಬಳಕೆಯಿಂದ ಕೆಲ ಹೊತ್ತಿನಲ್ಲೇ ಕಿರಿಕಿರಿ ಅನುಭವಿಸಿದ್ದಾರೆ.

Exit mobile version