Site icon PowerTV

ವೈಟ್ ಫೀಲ್ಡ್ ಮೆಟ್ರೋಗೆ ಪ್ರಧಾನಿ ಚಾಲನೆ : ಮೆಟ್ರೋ ವಿಶೇಷತೆಗಳು ಏನು ಗೊತ್ತಾ?

ಬೆಂಗಳೂರು : ಬಹು ನಿರೀಕ್ಷಿತ ವೈಟ್‌ ಫೀಲ್ಡ್‌-ಕೆ.ಆರ್‌.ಪುರ ಮೆಟ್ರೋ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಸ್ವತಃ ಪ್ರಧಾನಿ ಮೋದಿಯೇ ಬೆಂಗಳೂರಿಗೆ ಆಗಮಿಸಿ ಯೋಜನೆ ಲೋಕಾರ್ಪಣೆ ಗೊಳಿಸಿದ್ದಾರೆ. ಮೆಟ್ರೋ ಉದ್ಘಾಟನೆ ಬಳಿಕ ನರೇಂದ್ರ ಮೋದಿಯವರು ಅದೇ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೋದಿ ಜೊತೆ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಕೂಡ ಪ್ರಯಾಣಿಸಿದರು.

ಈ ವೇಳೆ ಮೋದಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಮೆಟ್ರೋದಲ್ಲಿ ಸಂಚಾರ ನಡೆಸಿದ ಮೋದಿ ಅವರು ಮೆಟ್ರೋ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. 13.71 ಕಿಲೋ ಮೀಟರ್‌ ಉದ್ದದ ನೇರಳೆ ಬಣ್ಣದ ಈ ಮಾರ್ಗದಲ್ಲಿ ಒಟ್ಟು 12 ಸ್ಟೇಷನ್‌ಗಳು ಬರಲಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರಿಂದ ಕೆ.ಆರ್‌.ಪುರ, ವೈಟ್‌ ಫೀಲ್ಡ್‌ ಭಾಗದಲ್ಲಿ ಆಗ್ತಿದ್ದ ಸಂಚಾರ ದಟ್ಟಣೆ ಅಲ್ಪಮಟ್ಟಿಗೆ ನಿವಾರಣೆಯಾಗಲಿದೆ.

ವೈಟ್​​ಫೀಲ್ಡ್​​ನಲ್ಲಿ ಕಾಮಗಾರಿ ಪೂರ್ಣವಾಗಿದೆ. ಆದ್ರೆ ಕೆ.ಆರ್.ಪುರಂ ನಿಲ್ದಾಣ ಇನ್ನೂ ಅಪೂರ್ಣವಾಗಿದೆ. ಪಿಲ್ಲರ್‌ಗಳು, ಸೀಮೆಂಟ್ ಕಾರ್ಯ, ಸ್ಟೇಷನ್‌ಗೆ ಕಂಬಿಗಳನ್ನು ಅಳವಡಿಸುವುದು ಸೇರಿದಂತೆ ಅನೇಕ ಕಾರ್ಯಗಳು ಬಾಕಿ ಇವೆ.

ವೈಟ್‌ಫೀಲ್ಡ್‌ ಟು ಕೆ.ಆರ್. ಪುರ ವಿಶೇಷತೆಗಳು

Exit mobile version