Site icon PowerTV

ಯಡಿಯೂರಪ್ಪ ಹೊಸ ಬಾಂಬ್

ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಕ್ಷೇತ್ರ ಸಂಕಟ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು, ಸಿದ್ದರಾಮಯ್ಯ ತನ್ನ ಕ್ಷೇತ್ರದ ಗೊಂದಲದ ಕುರಿತು ಪ್ರಚಾರ ಪಡೆಯಲು ಇಷ್ಟಪಡುತ್ತಾರೆ ಹೊರತು, ಅವರು ನಿಲ್ಲುವ ಕ್ಷೇತ್ರದ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಬಿ.ಎಸ್‌ ಯಡಿಯೂರಪ್ಪ ಹೊಸ ಬಾಂಬ್ ಹಾಕಿದ್ದಾರೆ.

ಸಿದ್ದರಾಮಯ್ಯ ಕೋಲಾರದಿಂದ ಮೈಸೂರಿಗೆ ವಾಪಾಸ್ ಬರಲು ಎಲ್ಲಾ ತಂತ್ರಗಳನ್ನು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರು ಕೋಲಾರ ಕ್ಷೇತ್ರ ಸೇರಿದಂತೆ ಬೇರೆ ಎಲ್ಲಿಂದಲೂ ನಿಲ್ಲುವುದಿಲ್ಲ. ಆದರೆ, ವಿಭಿನ್ನ ರೀತಿಯಲ್ಲಿ ಪ್ರಚಾರ ಪಡೆದು ಜನರ ಮನ ಗೆಲ್ಲಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಬಿಎಸ್ ವೈ ಕುಟುಕಿದ್ದಾರೆ.

ಸಿದ್ದರಾಮಯ್ಯ ಸುಮ್ಮನೆ ಜನರ ಮಧ್ಯೆ ನಾನು ಅಲ್ಲಿ ಇಲ್ಲಿ ನಿಲ್ತೀನಿ, ಎಲ್ಲಿ ಬೇಕಾದ್ರೂ ನಿಂತು ಗೆಲ್ತೀನಿ ಅಂತ ವಾತಾವರಣ ಸೃಷ್ಟಿ ಮಾಡಲು ಹೊರಟಿದ್ದಾರೆ. ಇದರಿಂದೇನು ಪ್ರಯೋಜನ ಅಂತ ನಮಗೇನೂ ಅರ್ಥ ಆಗಲ್ವಾ? ಇದಕ್ಕೆಲ್ಲ ಉತ್ತರ ಕೊಡುವ ಅಗತ್ಯ ಇಲ್ಲ. ಸಿದ್ದರಾಮಯ್ಯ ಎಲ್ಲಿ ನಿಂತ್ಕೋಬೇಕು ಅಂತ ಕಾಂಗ್ರೆಸ್ ಪಕ್ಷ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

Exit mobile version