Site icon PowerTV

ಒಕ್ಕಲಿಗ ಸಮಾಜವನ್ನು ಫೇಸ್ ಮಾಡಲಿ ನೋಡೋಣ : ಚೆಲುವರಾಯಸ್ವಾಮಿ

ಬೆಂಗಳೂರು : ದೇಜಗೌ ಪುಸ್ತಕಕ್ಕೆ ತಮ್ಮ ಮುನ್ನುಡಿ ವಿಚಾರವಾಗಿ ಮಾಜಿ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್​ಗೆ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದ ಬಗ್ಗೆ ಮಾತಾಡಬೇಕಾದ್ರೆ ಹತ್ತು ಬಾರಿ ಯೋಚನೆ ಮಾಡಬೇಕು. ನಮ್ಮದು ಒಕ್ಕಲಿಗ ಸಮಾಜ. ದೊಡ್ಡ ಸಮಾಜ, ಅವರು ಫೇಸ್ ಮಾಡಲಿ ನೋಡೋಣ ಎಂದು ಹೇಳಿದ್ದಾರೆ.

ಯಾವುದೇ ಪುಸ್ತಕ ಬಿಡುಗಡೆಗೂ ಮುನ್ನ ಮುನ್ನುಡಿ ಬರೆಸಿಕೊಳ್ಳುತ್ತಾರೆ. ನಾನು ಆ ಪುಸ್ತಕದ ರೆಫೆರೆನ್ಸ್ ನೋಡಿಲ್ಲ, ಯಾವ ರೀತಿ ಬರೆದಿದ್ದಾರೋ ಗೊತ್ತಿಲ್ಲ. ಬಿಜೆಪಿಗೆ ನಾಯಕತ್ವದ ಕೊರತೆಯಿಂದ ಈ ರೀತಿ ಆಗುತ್ತಿದೆ ಎಂದ ಕುಟುಕಿದ್ದಾರೆ.

ಇದನ್ನೂ ಓದಿ : ಟಿಪ್ಪು ಕಾಲದಲ್ಲಿ ಇದ್ದಿದ್ರೆ ನಾನೇ ಕತ್ತಿ ಹಿಡಿತಿದ್ದೆ : ಸಿ.ಟಿ ರವಿ

ಕಾಮನ್ ಸೆನ್ಸ್ ಇದ್ಯಾ?

ಬಿಜೆಪಿ ನಾಯಕರಿಗೆ ಒಂದಿಲ್ಲೊಂದು ಕಿತಾಪತಿ ಮಾಡೋದು ಬಿಟ್ಟರೆ ಬೇರೆ ಏನಿಲ್ಲ. ಯಾವುದೇ ವಿಚಾರ ಚರ್ಚೆ ಮಾಡುವಾಗ ಅದರ ಎಫೆಕ್ಟ್ ಏನಾಗುತ್ತೆ ಅಂತ ಗೊತ್ತಿರಬೇಕು. ಅಶ್ವತ್ಥನಾರಾಯಣ್​ಗೆ ಕಾಮನ್ ಸೆನ್ಸ್ ಇದ್ಯಾ ಎಂದು ಚೆಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

Exit mobile version