Site icon PowerTV

ರಾಹುಲ್ ಗಾಂಧಿ ಜೀವನದಲ್ಲಿ ಒಂದೇ ಒಂದು ದಿನ ಕೆಲಸಕ್ಕೆ ಹೋಗಿಲ್ಲ : ತೇಜಸ್ವಿ ಸೂರ್ಯ ಲೇವಡಿ

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿಯಲ್ಲಿ ಕಾಂಗ್ರೆಸ್​ನ 4 ಗ್ಯಾರಂಟಿ ಕಾರ್ಡ್​ ಯೋಜನೆ ‘ಯುವನಿಧಿ’ ಘೋಷಣೆ ಮಾಡಿರುವ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ.

ಗಂಗಾವತಿಯ ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಯುವಕರನ್ನು ಪರಾವಲಂಭಿ ಮಾಡುತ್ತಿದ್ದಾರೆ. ಯುವಕರು ನಾವೇ ದುಡಿದು ತಮ್ಮ ಖರ್ಚು ನೋಡಿಕೊಳ್ಳಬೇಕು. ಆದರೆ, ಕಾಂಗ್ರೆಸ್ ಯುವಕರನ್ನು ಅಪಮಾನ ಮಾಡಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಜೀವನದಲ್ಲಿ ಒಂದೇ ಒಂದು ದಿನ ಕೆಲಸಕ್ಕೆ ಹೋಗಿಲ್ಲ. ಅವರ ಅಮ್ಮ ಕೊಡುವ ಪಾಕೆಟ್ ಮನಿಯಿಂದ ಜೀವನ ಮಾಡಿದ್ದಾನೆ. ಇಂಥ ರಾಹುಲ್ ಗಾಂಧಿಗೆ ಯುವಕರನ್ನು ಸಬಲೀಕರಣ ಮಾಡುವ ಯೋಜನೆ ಕೊಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ರಾಮ ಮಂದಿರ ನಿರ್ಮಾಣ

ನಾವು ಕಳೆದ 40 ವರ್ಷದ ಹಿಂದೆ ಕೊಟ್ಟ ಗ್ಯಾರಂಟಿಯಂತೆ ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಜನರಿಗೆ ವಂಚನೆ ಮಾಡಲು ಇಂಥ ಗ್ಯಾರಂಟಿ ಕೊಡ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಯುವಕರಿಂದ ದೂರ ಹೋಗ್ತಿದ್ದಾರೆ. ಯುವಕರು ಮನೆಗೆ ಹೋಗಿ ಅಪ್ಪ ಹಾಗೂ ಅಮ್ಮನ ಹತ್ತಿರ ಹೋಗಿ ದುಡ್ಡಿಗೆ ಕೈಚಾಚಲ್ಲ. ಕೆಲವು ಯುವಕರು ಕಾಲೇಜಿಗೆ ಹೋಗಿ ಬಂದು ಬಳಿಕ ಕೆಲಸ ಮಾಡಿ ತಮ್ಮ ಪಾಕೆಟ್ ಮನಿಗೆ ಹಣ್ಣ ಹೊಂಚಿಕೊಳ್ಳುತ್ತಾರೆ. ಆದರೆ, ರಾಹುಲ್ ಗಾಂಧಿ ಸ್ವಾಭಿಮಾನಿ ಯುವಕರನ್ನು ಪರಾವಲಂಭಿ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version