Site icon PowerTV

ಒತ್ತಡಕ್ಕೆ ಮಣಿದ್ರಾ ಬಿಜೆಪಿ ಸಚಿವ : ದಿಢೀರ್ ಯೂಟರ್ನ್ ಗೆ ಕಾರಣವೇನು?

ಬೆಂಗಳೂರು : ಬಿಜೆಪಿ ಸಚಿವ ಹಾಗೂ ನಿರ್ಮಾಪಕರಾದ ಮುನಿರತ್ನ ಉರಿಗೌಡ ಹಾಗೂ ದೊಡ್ಡನಂಜೇಗೌಡ ಸಿನಿಮಾ ನಿರ್ಮಾಣದ ಕುರಿತು ಯೂ ಟರ್ನ್ ಹೊಡೆದಿದ್ದಾರೆ.

ಕೆಲ ದಿನಗಳ ಹಿಂದೆ ಈ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದ ಮುನಿರತ್ನ, ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀಗಳನ್ನು ಭೇಟಿಯಾಗಿ ಈ ವಿಷಯ ಚರ್ಚಿಸಿದರು. ಆ ಬಳಿಕ ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣವನ್ನು ಕೈಬಿಟ್ಟಿದ್ದಾಗಿ ಹೇಳಿದ್ದಾರೆ.

ಸಿನಿಮಾ ನಿರ್ಮಾಪಕನಾಗಿ ಬೇರೆ ಕಥೆಯನ್ನು ಹುಡುಕಿಕೊಳ್ಳುತ್ತೇನೆ. ಇನ್ನುಮುಂದೆ ಈ ಬಗ್ಗೆ ಚರ್ಚೆ ನಡೆಯುವುದಿಲ್ಲ. ಉರಿಗೌಡ ಮತ್ತು ನಂಜೇಗೌಡ ಸಿನಿಮಾ ನಡೆಯುವುದಿಲ್ಲ ಎಂದು ಮುನಿರತ್ನ ಹೇಳಿದ್ದಾರೆ.

ಟಿಪ್ಪು ಸುಲ್ತಾನ್ ಅವರನ್ನು ಕೊಂದಿದ್ದು ಉರಿಗೌಡ-ನಂಜೇಗೌಡ ಅನ್ನುವ ವಾದ ಮೂರು ಪಕ್ಷಗಳ ನಡುವಿನ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಸುಳಿವು ನೀಡಿದ್ದ ಅಶ್ವತ್ಥನಾರಾಯಣ

ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು, ಉರಿಗೌಡ ನಂಜೇಗೌಡ ಸಿನಿಮಾ ನಡೆಯಲ್ಲ ಎಂಬ ಬಗ್ಗೆ ಸುಳಿವು ನೀಡಿದ್ದರು. ಮುನಿರತ್ನ ಅವರು ನಿರ್ಮಿಸುತ್ತಿರುವ ಉರಿಗೌಡ ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರವೇನೂ ಇಲ್ಲ. ಅದಕ್ಕೆ ನಾನು ಚಿತ್ರಕತೆಯನ್ನೇನೂ ಬರೆಯುತ್ತಿಲ್ಲ ಎಂದು ಹೇಳಿದ್ದರು

Exit mobile version