Site icon PowerTV

ಬೊಮ್ಮಾಯಿ ಹೂವಿನ ವ್ಯಾಪಾರಿ, ಎಲ್ಲರ ಕಿವಿಗೂ ಹೂವು ಇಡ್ತಾರೆ : ಕಾಂಗ್ರೆಸ್ ಲೇವಡಿ

ಬೆಂಗಳೂರು : ವಿಧಾನಸಭಾ ಚುನಾವಣೆ ಸಮೀಪದಲ್ಲೇ ಬಿಜೆಪಿ ಸರ್ಕಾರಕ್ಕೆ ದೊಡ್ಡ ಗಂಡಾತರ ಎದುರಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಮೇಲೆ ಸವಾರಿ ಮಾಡಿದ್ದು, ಲಿಂಗಾಯ ಹಾಗೂ ಒಕ್ಕಲಿಗ ದಾಳ ಉರುಳಿಸಿದೆ.

ಹೌದು, ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತರು ಹಾಗೂ ಒಕ್ಕಲಿಗರ ಕಿವಿ ಮೇಲೆ ಬಿಜೆಪಿ ಸರ್ಕಾರ ಹೂವು ಇಟ್ಟಿದೆ ಎಂದು ರಾಜ್ಯ ಕಾಂಗ್ರೆಸ್‌ ಆರೋಪ ಮಾಡಿದೆ.

ಈ ಕುರಿತು ಟ್ವೀಟ್ ಮೂಲಕ ಮೀಸಲಾತಿ ವಿಚಾರ ಪ್ರಸ್ತಾಪಿಸಿ ಕಿಡಿಕಾರಿದೆ. 2A ಮೀಸಲಾತಿ ಕುರಿತು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ವರದಿ ನೀಡಲು ಸದ್ಯಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಆಗಾದರೆ ಈ ಸಮುದಾಯಗಳಿಗೆ ಸರ್ಕಾರದ ಉತ್ತರವೇನು? ಎಂದು ಬಿಜೆಪಿಗೆ ಪ್ರಶ್ನಿಸಿದೆ.

ಸಿಎಂ ಬೊಮ್ಮಾಯಿ ಹೂವಿನ ವ್ಯಾಪಾರಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಹೂವಿನ ವ್ಯಾಪಾರಿ ಇದ್ದ ಹಾಗೆ ಧಾರಾಳವಾಗಿ ಎಲ್ಲರ ಕಿವಿಗೂ ಹೂವಿಡುತ್ತಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ. ಭ್ರಷ್ಟ ಬಿಜೆಪಿ ಸರ್ಕಾರದಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆದ 25 ಲಕ್ಷಕ್ಕೂ ಅಧಿಕ ಪದವೀಧರ ಯುವ ಸಮುದಾಯದ ನಿರೀಕ್ಷೆ ಬತ್ತಿ ಹೋಗಿದೆ ಎಂದು ಕಿಡಿಕಾರಿದೆ.

ಇನ್ನೂ ಪಿಎಸ್ಐ ಹಗರಣದಲ್ಲಿ 54 ಸಾವಿರ ಸಂತ್ರಸ್ತರಿದ್ದಾರೆ ಎಂದಿರುವ ರಾಜ್ಯ ಕಾಂಗ್ರೆಸ್, ಪಿಎಸ್‌ಐ, ಕೆಪಿಟಿಸಿಎಲ್, ಕೆಎಂಎಫ್ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿನ ಹುದ್ದೆ ಮಾರಾಟದ ಹಗರಣವಾಗಿದೆ ಎಂದು ರಾಜ್ಯದಲ್ಲಿ ನಡೆದ ಹಗರಣಗಳನ್ನು ಉಲ್ಲೇಖಿಸಿ ಆಕ್ರೋಶ ಹೊರಹಾಕಿದೆ.

Exit mobile version