Site icon PowerTV

ಮಾಡಾಳ್ ಲಂಚ ಪ್ರಕರಣ : ಮಲ್ಲಿಕಾರ್ಜುನ್ ಬೆಂಬಲಿಗರಿಂದ ಬಿಜೆಪಿ ನಾಯಕರಿಗೆ ಘೇರಾವ್

ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಪ್ರಕರಣ ರಾಜ್ಯ ಬಿಜೆಪಿ ಭಾರೀ ಮುಜುಗರ ತರಿಸಿದೆ. ಇದೀಗ, ವಿಜಯ ಸಂಕಲ್ಪ ಶಿಬಿರಕ್ಕೆ ತೆರಳಿದ್ದ ಬಿಜೆಪಿ ನಾಯಕರಿಗೂ ಇದೇ ಬಿಸಿ ತಟ್ಟಿದೆ.

ಹೌದು, ಮಾಡಾಳ್ ಮಲ್ಲಿಕಾರ್ಜುನ್ ಬೆಂಬಲಿಗರು ಸಂಸದ ಜಿ.ಎಂ.ಸಿದ್ದೇಶ್ವರ್, ಎಂಎಲ್ ಸಿ ರವಿಕುಮಾರ್ ಗೆ ಘೇರಾವ್ ಹಾಕಿದ್ದಾರೆ.

ಚನ್ನಗಿರಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವೇಳೆ ಈ ಘಟನೆ ನಡೆದಿದೆ. ಹಾಗಾಗಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅರ್ಧಕ್ಕೆ ಮೊಟಕುಗೊಂಡಿದೆ. ವಿಜಯ ಸಂಕಲ್ಪ ಯಾತ್ರೆ ಶೀತಲ ಸಮರಕ್ಕೆ ಬಲಿಯಾಗಿದೆ.

ಇದೀ ವೇಳೆ ಎಚ್.ಎಸ್ ಶಿವಕುಮಾರ್, ಮಾಡಾಳ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ತಮ್ಮ ನಾಯಕರ ಪರ ಘೋಷಣೆ ಕೂಗಿದ್ದು, ಜೈಕಾರ ಹಾಕಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬೆಂಬಲಿಗರ ವರ್ತನೆಗೆ ಜಿ.ಎಂ.ಸಿದ್ದೇಶ್ವರ್, ರವಿಕುಮಾರ್ ಮುಜುಗರಗೊಂಡಿದ್ದಾರೆ.

ಮಾಡಾಳ್ ಬೆಂಬಲಿಗರು ಸಿದ್ಧೇಶ್ವರ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಮೆರವಣಿಗೆ ಮೊಟಕುಗೊಳಿಸಿ ನಾಯಕರು ವಾಹನದಿಂದ ಕೆಳಗಿಳಿದಿದ್ದಾರೆ. ಮಾಡಾಳ್ ಮತ್ತು ಶಿವಕುಮಾರ್ ಶೀತಲ ಸಮರ ತಾರಕ್ಕಕ್ಕೆರಿದೆ.

Exit mobile version