Site icon PowerTV

ಗುಬ್ಬಿ ಶಾಸಕರ ಕುಕ್ಕರ್ ಪಾಲಿಟಿಕ್ಸ್ : 21.68 ಲಕ್ಷ ಮೌಲ್ಯದ ಕುಕ್ಕರ್ ಪೊಲಿಸರ ವಶ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರ ಪ್ರಭುಗಳ ಓಲೈಕೆಗೆ ರಾಜಕೀಯ ನಾಯಕರು ಮುಂದಾಗಿದ್ದಾರೆ. ಗಿಫ್ಟ್ ಗಳ ಆಮೀಷವೊಡ್ಡಿ ಮತದಾರರನ್ನು ಸೆಳೆಯುವ ತಂತ್ರದ ಮೊರೆ ಹೋಗಿದ್ದಾರೆ.

ಗುಬ್ಬಿ ಶಾಸಕ ಎಸ್‌.ಆರ್. ಶ್ರೀನಿವಾಸ್ ಅವರ ಭಾವಚಿತ್ರವಿದ್ದ 1,142 ಕುಕ್ಕರ್ ಬಾಕ್ಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಣಿಗಲ್ ತಾಲ್ಲೂಕಿನ ಅಂಚೇಪಾಳ್ಯದ ಚೆಕ್‌ಪೋಸ್ಟ್ ಬಳಿ ಶುಕ್ರವಾರ ಕಂಟೇನರ್ ತಪಾಸಣೆ ವೇಳೆ ಈ ಕುಕ್ಕರ್ ಗಳು ಪತ್ತೆಯಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ವಶಕ್ಕೆಪಡೆದಿದ್ದಾರೆ.

ಕನಕಪುರದಿಂದ ಹೆಬ್ಬೂರಿಗೆ ಕಂಟೇನರ್ ಹೋಗುತ್ತಿತ್ತು. ಕುಕ್ಕರ್‌ಗಳ ಬಿಲ್‌ ಬೇರೆ ವ್ಯಕ್ತಿಯ ಹೆಸರಿನಲ್ಲಿದೆ. ಶಾಸಕರ ಬೆಂಬಲಿಗರು ಖರೀದಿ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

21.68 ಲಕ್ಷ ಮೌಲ್ಯದ ಕುಕ್ಕರ್‌

ಪೊಲೀಸರು ಬರೋಬ್ಬರಿ 21.68 ಲಕ್ಷ ಮೌಲ್ಯದ ಕುಕ್ಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಕುಕ್ಕರ್‌ ಬೆಲೆ 1,899 ಎಂದು ಅಂದಾಜಿಸಲಾಗಿದೆ. ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

Exit mobile version