Site icon PowerTV

ನಾಳೆ ‘ಸುವರ್ಣ ಯುಗಾದಿ ಶುಭಾರಂಭ’ : ಏನೆಲ್ಲಾ ವಿಶೇಷತೆ ಇದೆ ಗೊತ್ತಾ?

ಬೆಂಗಳೂರು : ನಾಡಿನೆಲ್ಲೆಡೆ ಯುಗಾದಿ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿಯ ಯುಗಾದಿ ಹಬ್ಬಕ್ಕೆ ತನ್ನ ಪ್ರೇಕ್ಷಕರಿಗೆ ಹೊಸತನದೊಂದಿಗೆ ವಿನೂತನ ಕಾರ್ಯಕ್ರಮ ನೀಡಲು ಸುವರ್ಣ ವಾಹಿನಿ ಮುಂದಾಗಿದೆ.

ಹೌದು, ಸುವರ್ಣ ವಾಹಿನಿಯು ಕನ್ನಡಿಗರಿಗೆ ಹಿಂದಿನಿಂದಲೂ ವಿಭಿನ್ನ ರೀತಿಯ ವಿಶಿಷ್ಟ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ನಮ್ಮ ಲಚ್ಚಿ, ಕಥೆಯೊಂದು ಶುರುವಾಗಿದೆ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆ ಮನೆಯ ಮಾತಾಗಿದೆ.

ಈ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಸ್ಟಾರ್ ಸುವರ್ಣ ವಾಹಿನಿಯು ‘ಸುವರ್ಣ ಯುಗಾದಿ ಶುಭಾರಂಭ’ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಿದೆ.

ಯುಗಾದಿ ಹಬ್ಬವನ್ನು ಹೊಸತನದಿಂದ ಬರಮಾಡಿಕೊಳ್ಳಲು ಸ್ಟಾರ್ ಸುವರ್ಣ ವಾಹಿನಿಯು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಬೇವು ಬೆಲ್ಲದ ರುಚಿಯನ್ನು ಸವಿಯಲು ಕನ್ನಡ ಬೆಳ್ಳಿತೆರೆಯ ಕಲಾವಿದರ ಜೊತೆ ಸುವರ್ಣ ಪರಿವಾರದ ನಕ್ಷತ್ರಗಳು ಪಾಲ್ಗೊಂಡಿದ್ದರು.

ಮೆರುಗು ಹೆಚ್ಚಿಸಿದ ಅಶ್ವಿನ್ ಪುನೀತ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ. ನಟ ಡಾಲಿ ಧನಂಜಯ್ ಅವರ ರಗಡ್ ಡೈಲಾಗ್ ಗೆ ಸುವರ್ಣ ಸ್ಟಾರ್ಸ್ ಕುಪ್ಪಳಿಸಿದ್ದಾರೆ.

ಕಾಂತಾರದ ಬೆಡಿಗೆ ಭಾಗಿ

ಗೋಲ್ಡನ್ ಕ್ವೀನ್ ಅಮೂಲ್ಯ ದಂಪತಿಗಳು ಈ ಯುಗಾದಿಯನ್ನು ಸ್ಟಾರ್ ಸುವರ್ಣದ ಜೊತೆ ಸಂಭ್ರಮಿಸಿದ್ದಾರೆ. ಜೊತೆಗೆ ಕಾಂತಾರದ ಸಪ್ತಮಿ ಗೌಡ, ಸಾನಿಯಾ ಅಯ್ಯರ್, ವಾಸುಕಿ ವೈಭವ್ ಸೇರಿದಂತೆ ಇನ್ನಷ್ಟು ಕಲಾವಿದರು ಮನರಂಜನೆಯ ಹೂರಣವನ್ನು ನೀಡಿದ್ದಾರೆ. ‘ಹೊಂಗನಸು’ ಧಾರಾವಾಹಿ ಖ್ಯಾತಿಯ ಮುಕೇಶ್ ಗೌಡ ಆಗಮಿಸಿದ್ದು ಇದೇ ಮೊದಲ ಬಾರಿಗೆ ಡಬ್ಬಿಂಗ್ ಧಾರಾವಾಹಿಯ ಕಲಾವಿದರನ್ನು ಕಾರ್ಯಕ್ರಮದಲ್ಲಿ ಕಾಣಬಹುದಾಗಿದೆ.

ಸಂಜೆ 6 ಗಂಟೆಗೆ ಪ್ರಸಾರ

ಒಟ್ನಲ್ಲಿ, ಸ್ಟಾರ್ ಸುವರ್ಣ ಈ ಯುಗಾದಿಯಿಂದ ಹೊಸತನದ ಕಾರ್ಯಕ್ರಮಗಳ ಜೊತೆ, ಹೊಸ ಹುಮ್ಮಸ್ಸಿನಲ್ಲಿ ಇನ್ನಷ್ಟು ವರ್ಣಮಯಗೊಂಡು ಪ್ರೇಕ್ಷಕರಿಗೆ ರಸದೌತಣ ನೀಡಲಿದೆ. ‘ಸುವರ್ಣ ಯುಗಾದಿ ಶುಭಾರಂಭ’ ಕಾರ್ಯಕ್ರಮವು ನಾಳೆ (ಮಾರ್ಚ್ 19) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

Exit mobile version