Site icon PowerTV

ಸಿದ್ದರಾಮಯ್ಯ ವಿಧಾನಸೌಧದಲ್ಲಿ ಇರಬೇಕು : ಸಿ.ಎಂ ಇಬ್ರಾಹಿಂ

ಬೆಂಗಳೂರು : ಕೋಲಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಬೇಡ ಎಂಬ ವಿಚಾರ ಕುರಿತು ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ದೊಡ್ಡ ನಾಯಕರು. ಅವರಿಗೆ ನಾನೇನು ಹೇಳಲಿ. ದೇವರು ಸಿದ್ದರಾಮಯ್ಯನವರಿಗೆ ಸದ್ಬುದ್ದಿ ಕೊಡಲಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ವಿಧಾನಸೌಧದಲ್ಲಿ ಇರಬೇಕು. ವಿರೋಧ ಪಕ್ಷದ ನಾಯಕರಾಗಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸಲಹೆ ಕೊಡಬೇಕು. ಸಿದ್ದರಾಮಯ್ಯನವರಿಗೆ ಅನುಭವವಿದೆ. ಅವರು ತೀರ್ಮಾನ ಮಾಡ್ತಾರೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.

ಕೋಲಾರದ ಕೈ ನಾಯಕರೊಂದಿಗೆ ಸಭೆ

ಇತ್ತ, ಸಿದ್ದರಾಮಯ್ಯ ಜೊತೆಗೆ ಕೋಲಾರದ ಕಾಂಗ್ರೆಸ್ ನಾಯಕರ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಜೊತೆ ಚರ್ಚೆ ಬಳಿಕ ಮಾತನಾಡಿರುವ ಎಂ.ಆರ್ ಸೀತಾರಾಂ, ಯಾವ ಕ್ಷೇತ್ರದಲ್ಲಿ ಸ್ಪರ್ಧೆ  ಮಾಡಬೇಕು ಎನ್ನುವ ಹೈಕಮಾಂಡ್ ನಿರ್ಧಾರ ಮಾಡ್ತಾರೆ ಅಂತಾ ಸಿದ್ದರಾಮಯ್ಯ ಹೇಳುತ್ತಾ ಬಂದಿದ್ದಾರೆ. ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತಾ ನಮಗೂ ಹೇಳಿದ್ದಾರೆ ಎಂದಿದ್ದಾರೆ.

ಕೋಲಾರ ಸ್ಪರ್ಧೆ ಸುರಕ್ಷಿತ

ಕೋಲಾರ ಸ್ಪರ್ಧೆ ಸುರಕ್ಷಿತ ಎಂದು ನಾವು ಅವರಲ್ಲಿ ಹೇಳಿದ್ದೇವೆ. ನೀವು ನಾಮಪತ್ರ ಸಲ್ಲಿಕೆ ಮಾಡಿ, ನಾವು ನೋಡಿಕೊಳ್ಳುತ್ತೇವೆ ಎಂದಿದ್ದೇವೆ. ಮತ್ತೊಮ್ಮೆ ಹೈಕಮಾಂಡ್ ಬಳಿ ಮಾತನಾಡಿ ಎಂದು ಮನವಿ ಮಾಡಿದ್ದೇವೆ. ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಈಗಲೂ ವಿಶ್ವಾಸ ಇದೆ. ಆದರೆ ಅರ್ಜಿಯಲ್ಲಿ ಕ್ಷೇತ್ರ ಆಯ್ಕೆ ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ. ರಾಹುಲ್ ಗಾಂಧಿ ಅವರನ್ನು ಈ ಸಂಬಂಧ ಭೇಟಿ ಮಾಡ್ತೇವೆ ಎಂದು ತಿಳಿಸಿದ್ದಾರೆ.

ಕೋಲಾರ ಕ್ಷೇತ್ರ ಹದವಾಗಿದೆ. ಈ ಕಾರಣಕ್ಕೆ ಕೋಲಾರದಲ್ಲಿ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದೇವೆ. ರಾಹುಲ್ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗಾವಿಗೆ ನಾವೆಲ್ಲಾ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡ್ತೇವೆ ಎಂದು ಹೇಳಿದ್ದಾರೆ.

Exit mobile version