Site icon PowerTV

ಕಾಂಗ್ರೆಸ್ ಟಿಕೆಟ್ : ಇವರೇ ತುಮಕೂರು ‘ಕೈ’ ಅಭ್ಯರ್ಥಿಗಳು

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್​ಗಾಗಿ ಲಾಭಿ ನಡೆಸುತ್ತಿದ್ದಾರೆ. ಇತ್ತ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದ್ದು ಪಟ್ಟಿಯನ್ನು ಹೈಕಮಾಂಡ್ ಒಪ್ಪಿಗೆಗಾಗಿ ದೆಹಲಿಗೆ ರವಾನಿಸಲಾಗಿದೆ.

ರಾಜ್ಯದಲ್ಲಿ ತನ್ನ ಪಾರುಪತ್ಯ ಉಳಿಸಿಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಕೈ ಯಾರಿಗೆ ಮನೆ ಹಾಕುತ್ತದೆ ಅನ್ನೋದು ಕುತೂಹಲ ಮೂಡಿಸಿದೆ. ಒಂದು ವಾರದಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂಬ ಸುದ್ದಿ ಹೊರಬಿದ್ದಿದೆ.

ಕಲ್ಪತರು ನಾಡು ತುಮಕೂರು ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಂಡಿದ್ದು ಕೆಲವೊಂದು ಕ್ಷೇತ್ರಗಳಲ್ಲಿ ಇಬ್ಬರು ಆಕಾಂಕ್ಷಿಗಳು ಇರುವುದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ : ಪದೇ ಪದೆ ಟಿಪ್ಪು ಯಾಕೆ ನೆನಪಾಗ್ತಾನೆ ನಮ್ಗೆ ಗೊತ್ತು : ಅಶ್ವತ್ಥನಾರಾಯಣ

ಒಟ್ಟಾರೆ,ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

Exit mobile version