Site icon PowerTV

ಈಜುಕೊಳದಲ್ಲಿ ಊರುಗೋಲು ಹಿಡಿದು ನಡೆದಾಡಿದ ಪಂತ್

ಬೆಂಗಳೂರು : ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ರಿಷಭ್ ಪಂತ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಗೊತ್ತಿರುವ ವಿಷಯ. ಇದೀಗ ಪಂತ್ ಆರೋಗ್ಯ ಸುಧಾರಿಸುತ್ತಿದ್ದು, ನಡೆದಾಡಲು ಶುರು ಮಾಡಿದ್ದಾರೆ.

ಹೌದು, ಈಜುಕೊಳದಲ್ಲಿ ಊರುಗೋಲಿನ ಸಹಾಯದಿಂದ ನಡೆದಾಡುತ್ತಿರುವ ವಿಡಿಯೋವನ್ನು ರಿಷಬ್ ಪಂತ್ ಸೋಶಿಯಲ್ ಮೀಡಿಯಾದಲ್ಲಿ (ಟ್ವಿಟರ್‌) ಪೋಸ್ಟ್ ಮಾಡಿದ್ದಾರೆ.

ಸಣ್ಣದೇ ಆಗಿರಲಿ, ದೊಡ್ಡದೇ ಆಗಿರಲಿ ಎಲ್ಲದಕ್ಕೂ ನಾವು ಕೃತಜ್ಞರಾಗಿರಬೇಕು ಎಂದು ಟ್ವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಟ್ವಿಟ್ ಅನ್ನು ಅಭಿಮಾನಿಗಳು ಶೇರ್ ಮಾಡಿದ್ದು, ಬೇಗನೆ ಗುಣಮುಖರಾಗಿ, ನಿಮ್ಮನ್ನು ಮೈದಾನದಲ್ಲಿ ನೋಡಬಯಸುತ್ತೇವೆ ಎಂದು ಹಾರೈಸಿದ್ದಾರೆ.

ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್‌ ಯಾದವ್‌ ಮತ್ತು ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ, ಪಂತ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿ, ಶುಭ ಹಾರೈಸಿದ್ದಾರೆ.

ಇದನ್ನೂ ಓದಿ : ಏಕದಿನ ಸರಣಿಗೆ ಸ್ಟೀವ್ ಸ್ಮಿತ್ ನಾಯಕ

ಡೆಲ್ಲಿಗೆ ಡೇವಿಡ್ ವಾರ್ನರ್ ನಾಯಕ

ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುನ್ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಕಾರು ಅಪಘಾತದಲ್ಲಿ ದೆಹಲಿ ತಂಡದ ನಾಯಕ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರ ಸ್ಥಾನದಲ್ಲಿ ಡೇವಿಡ್ ವಾರ್ನರ್ ನಾಯಕತ್ವ ವಹಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಡೇವಿಡ್ ವಾರ್ನರ್ ಎಸ್ಆ‌ರ್ ಎಚ್ ನಾಯಕರಾಗಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿದ್ದರು. ವಾರ್ನರ್ ಟಿ-20 ಕ್ರಿಕೆಟ್‌ನ ಅನುಭವಿ ಕ್ರಿಕೆಟಿಗರ ಪೈಕಿ ಒಬ್ಬರಾಗಿದ್ದಾರೆ.

Exit mobile version