Site icon PowerTV

ಕೆಲಸಕ್ಕೆ ಹೋಗ್ತೀನಿ ಎಂದ ಸೊಸೆ : ಮುಂದೆ ಆಗಿದ್ದು ಅಮಾನವೀಯ

ಬೆಂಗಳೂರು : ಹೆಣ್ಣು ಸಮಾಜದಲ್ಲಿ ಪುರುಷರಂತೆಯೇ ಸಮಾನಳು. ಇದು ಕೇವಲ ಹೇಳಿಕೆಗಷ್ಟೇ ಸೀಮಿತವಾದಂತೆ ಕಾಣುತ್ತಿದೆ. ಇದಕ್ಕಿ ಪ್ರತ್ಯಕ್ಷ ಸಾಕ್ಷಿ ಇಲ್ಲದೆ ನೊಡಿ.

ಕೆಲಸಕ್ಕೆ ಸೇರಲು ಬಯಸಿದ ಸೊಸೆಯ ಮೇಲೆ ಆಕೆಯ ಮಾವ ಇಟ್ಟಿಗೆಯಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಅಮಾನುಷ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

26 ವರ್ಷದ ಕಾಜಲ್‌ ಮಾವನಿಂದ ಹಲ್ಲೆಗೊಳಗಾದ ಸೊಸೆ. ಕಾಜಲ್ ಕೆಲಸಕ್ಕೆ ಸೇರಲು ಬಯಸಿದ್ದರು. ಆಕೆಯ ನಿರ್ಧಾರವನ್ನು ಗಂಡನ ಮನೆಯವರು ಒಪ್ಪಿಕೊಂಡಿರಲಿಲ್ಲ. ಇದೇ ಕಾರಣಕ್ಕಾಗಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಾಜಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡು ರಸ್ತೆಯಲ್ಲಿ ಇಟ್ಟಿಗೆಯಿಂದ ಹಲ್ಲೆ

ಕಾಜಲ್‌ ಕೆಲಸಕ್ಕೆ ಸೇರಿ ಗಂಡ ಪ್ರವೀಣ್‌ ಕುಮಾರ್‌ಗೆ ಸಹಾಯ ಮಾಡಲು ಬಯಸಿದ್ದರು. ಆ ನಿಟ್ಟಿನಲ್ಲಿ ಆಕೆ ಮಂಗಳವಾರ ಕೆಲಸಕ್ಕಾಗಿ ಸಂದರ್ಶನಕ್ಕೆ ತೆರಳುತ್ತಿದ್ದರು. ಈ ವಿಷಯ ತಿಳಿದ ಆಕೆಯ ಮಾವ ನಡು ರಸ್ತೆಯಲ್ಲೇ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮಾವನ ಮೇಲೆ ಪ್ರಕರಣ ದಾಖಲು

ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದರಿಂದ ಆಕೆಯ ತಲೆಗೆ ಗಂಭೀರ ಗಾಯವಾಗಿದೆ. ಘಟನೆಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಕಾಜಲ್‌ ಪೋಷಕರು ನೀಡಿದ ದೂರಿನನ್ವಯ ಆರೋಪಿ ಮಾವನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Exit mobile version