Site icon PowerTV

ಡಿಕೆಶಿ ಬಳಸುವ ಭಾಷೆ ಕನ್ನಡಿಗರಿಗೆ ಶೋಭೆ ತರಲ್ಲ : ಸಿಎಂ ಬೊಮ್ಮಾಯಿ

ಬೆಂಗಳೂರು : ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹ ಖಂಡಿಸಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ, ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹ ತಕರಾರು ಜನಸಾಮಾನ್ಯರದ್ದಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಡಿ.ಕೆ ಶಿವಕುಮಾರ್ ಅವರು ಬಳಸುವ ಭಾಷೆ, ನಡೆದುಕೊಂಡ ರೀತಿ ಯಾವುದೇ ಕನ್ನಡಿಗರಿಗೆ ಶೋಭೆ ತರುವಂಥದ್ದಲ್ಲ. ರಾಷ್ಟ್ರೀಯ ಹೆದ್ದಾರಿ ಬರುವ ಮುನ್ನವೂ ಟೋಲ್ ಸಂಗ್ರಹವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಬೊಮ್ಮಾಯಿ ಕುಟುಕಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸ್ಟ್ರಾಟರ್ಜಿ ಬಗ್ಗೆ ಬಾಯಿ ಬಿಟ್ಟ ಸಿಎಂ ಬೊಮ್ಮಾಯಿ

ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಬಹಳಷ್ಟು ಸೇವೆಗಳು ಸರ್ವಿಸ್ ರಸ್ತೆಯಲ್ಲಿಯೇ ಇದೆ. ಅಲ್ಲೆಲ್ಲೂ ಟೋಲ್ ಇಲ್ಲ. ವಿನಾಕಾರಣ ರಾಜಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

ಟೋಲ್ ಸುಲಿಗೆ ನಡೆಯುತ್ತಿದೆ?

ಇನ್ನೂ ರಾಜ್ಯ ಕಾಂಗ್ರೆಸ್ ಬೆಂಗಳೂರು-ಮೈಸೂರು ಹೆದ್ದಾರಿಯ ನ್ಯೂನ್ಯತೆಗಳ ಬಗ್ಗೆ ಬಿಚ್ಚಿಟ್ಟಿದೆ. ಸಮರ್ಪಕ ಆಂಬುಲೆನ್ಸ್‌ಗಳಿಲ್ಲ. ಶೌಚಾಲಯಗಳಿಲ್ಲ. ಸುರಕ್ಷಾ ಕ್ರಮಗಳಿಲ್ಲ. ಸರ್ವಿಸ್ ರಸ್ತೆಗಳಿಲ್ಲ.ಕಳಪೆ ಕಾಮಗಾರಿಗೆ ಮಿತಿ ಇಲ್ಲ. ರಸ್ತೆ ಕಿತ್ತು ಬರುತ್ತಿದೆ. ಸುರಕ್ಷತೆ ಹಾಗೂ ವೈಜ್ಞಾನಿಕ ಮಾನದಂಡಗಳ ಪಾಲನೆಯಾಗಿಲ್ಲ. ಹೀಗಿರುವಾಗ, ಯಾವ ಸಂತೋಷಕ್ಕೆ ಟೋಲ್ ಸುಲಿಗೆ ನಡೆಯುತ್ತಿದೆ? ಎಂದು ಪ್ರಶ್ನೆ ಮಾಡಿದೆ.

Exit mobile version