Site icon PowerTV

ವಿಜಯೇಂದ್ರ ಯಾರು? ಅವನ ಮೇಲೆ ದೂರು ಕೊಟ್ಟು ಏನಾಗಬೇಕು : ವಿ. ಸೋಮಣ್ಣ

ನವದೆಹಲಿ / ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ಪುತ್ರ ಬಿ.ವೈ ವಿಜಯೇಂದ್ರ ವಿರುದ್ದ ಅಸಮಾಧಾನದ ಕುರಿತು ವಸತಿ ಸಚಿವ ವಿ. ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿಯಲ್ಲಿ ಇಂದು ಮಾತನಾಡಿದ ಸಚಿವ ವಿ.ಸೋಮಣ್ಣ, ವಿಜಯೇಂದ್ರ ಯಾರು? ಅವರಿಗೂ ನನಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ.

ವಿಜಯೇಂದ್ರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ. ವಿಜಯೇಂದ್ರಗೆ 40 ವರ್ಷ ವಯಸ್ಸು. ನನಗೆ 70 ವರ್ಷ ವಯಸ್ಸು. ವಿಜಯೇಂದ್ರ ಬಗ್ಗೆ ನನ್ನ ಪುತ್ರನಿಗೆ ಅಸಮಾಧಾನವಿದ್ದರೇ ಅವನನ್ನೇ ಕೇಳಿ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ನನ್ನ ಹತ್ರ ಸಾವಿರಾರು ಜನ ಇದ್ದಾರೆ

ಮುಂದುವರಿದು, ಯಾರನ್ನು ತೇಜೋವಧೆ ಮಾಡುವುದು ಸರಿಯಲ್ಲ. ಇಂತವರು ನನ್ನ ಹತ್ರ ಸಾವಿರಾರು ಜನ ಇದ್ದಾರೆ. ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ಬಿಜೆಪಿಗೆ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ನಾನು ಬಿಜೆಪಿ ಬಿಡಲ್ಲ..!

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಯಾಗಿ ವಾಪಸ್ ಬೆಂಗಳೂರಿಗೆ ಹೋಗುತ್ತೇನೆ. ನನ್ನ ಇತಿಮಿತಿಯಲ್ಲಿ ನಾನು ಜೀವನ ಮಾಡುತ್ತಿದ್ದೇನೆ. ನನ್ನಿಂದ ಬಿಜೆಪಿಗೆ ಅಪಚಾರವಾಗಬಾರದು. ನಾನು ಬಿಜೆಪಿ ಬಿಡಲ್ಲ. ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸೋಮಣ್ಣ ನನಗೆ ತಿಳಿಸಿಯೇ ಹೋಗಿದ್ದಾರೆ 

ಸೋಮಣ್ಣ ಅವರು ನನಗೆ ತಿಳಿಸಿಯೇ ದೆಹಲಿಗೆ ಹೋಗಿದ್ದಾರೆ. ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲು ಹೋಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Exit mobile version