Site icon PowerTV

ಶಾಕಿಂಗ್ : 10 ಸಾವಿರ ಉದ್ಯೋಗಿಗಳ ವಜಾ

ಬೆಂಗಳೂರು : ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ ತನ್ನ ಉದ್ಯೋಗಿಗಳಿಗೆ ದೊಡ್ಡ ಶಾಕ್ ನೀಡಿದೆ. ಮತ್ತೆ, ಭಾರೀ ಪ್ರಮಾಣದ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದೆ.

ಹೌದು, ಎರಡನೇ ಹಂತದ ಉದ್ಯೋಗ ಕಡಿತದಲ್ಲಿ ಮತ್ತೆ ಬರೋಬ್ಬರಿ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ಮೆಟಾ ಘೋಷಿಸಿದೆ.

ಮೆಟಾ ಸಂಸ್ಥೆಯ ಆದಾಯದಲ್ಲಿ ಇಳಿಕೆಯಾಗಿದೆ. ಈ ಕಾರಣದಿಂದ ಉದ್ಯೋಗಿಗಳನ್ನು ವಜಾ ಮಾಡಲು ಈ ಕ್ರಮ ಅನಿವಾರ್ಯ ಎಂದು ಆಡಳಿತವರ್ಗ ಹೇಳಿದೆ.

11 ಸಾವಿರ ಉದ್ಯೋಗಿಗಳ ವಜಾ

ಕಳೆದ ನವೆಂಬರ್‌ನಲ್ಲಿ ಮೆಟಾ11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತೆ 10 ಸಾವಿರ ಉದ್ಯೋಗಿಗನ್ನು ವಜಾ ಮಾಡುತ್ತಿದೆ. ಈ ಹೇಳಿಕೆ ಹೊರಬಿಳುತ್ತಿದ್ದಂತೆಯೇ ಮೆಟಾ ಸಂಸ್ಥೆಯ ಶೇರುಗಳ ಮೌಲ್ಯದಲ್ಲಿ ಶೇ.6ದಷ್ಟು ಏರಿಕೆ ದಾಖಲಾಗಿದೆ.

Exit mobile version