Site icon PowerTV

ಅಲ್ಲಾ ಕಿವುಡಾ.. : ಈಶ್ವರಪ್ಪ ಹೇಳಿಕೆಗೆ ಖಾದರ್ ಕಿಡಿ

ಬೆಂಗಳೂರು : ಅಲ್ಲಾ ಹಾಗೂ ಆಜಾನ್ ಬಗ್ಗೆ ಮಂಗಳೂರಿನಲ್ಲಿ ವಿವಾದಾತ್ಮಕ ಹೇಳಿಕೆ ಹರಿಬಿಟ್ಟಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ವಿರದ್ಧ ಶಾಸಕ ಯು.ಟಿ ಖಾದರ್​ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಮಾತಿಗೂ ಮೆದುಳಿಗೂ ಕನೆಕ್ಷನ್ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಈಶ್ವರಪ್ಪ ಹೇಳಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಅವರು ಶಾಸಕ ಸ್ಥಾನ ಉಳಿಯುತ್ತಾ ಎನ್ನುವ ಚಿಂತೆಯಲ್ಲಿದ್ದಾರೆ. ಅದೇ ಚಿಂತೆಯಲ್ಲಿ ಸಮಯ ಕಳಕೊಂಡು ಮಾನಸಿಕ ಅಸ್ವಸ್ಥರಾಗಿ ಮಾತನಾಡುತ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ : ಸ್ಫೋಟಕ ಹೇಳಿಕೆ : ಮೋದಿ ಸಮಾಧಿ ನಿರ್ಮಿಸಲು ಪ್ಲಾನ್

ಧರ್ಮಕ್ಕೇನು ನಷ್ಟ ಆಗಲ್ಲ

ಯಾವುದೇ ಧರ್ಮಕ್ಕೂ ಅದರದ್ದೇ ಮೌಲ್ಯ ಇದೆ. ಅವಹೇಳನ ಮಾಡಿದ ಮಾತ್ರಕ್ಕೆ ಧರ್ಮಕ್ಕೇನು ನಷ್ಟ ಆಗಲ್ಲ. ಯಾರು ಅವಹೇಳನ ಮಾಡ್ತಾರೋ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.

ಹೈಕಮಾಂಡ್ ಮೆಚ್ಚಿಸುವ ಕೆಲಸ

ವಿಧಾನಸಭಾ ಚುನಾವಣೆ ವೇಳೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಈಶ್ವರಪ್ಪ ಈ ರೀತಿ ಮಾತನಾಡುತ್ತಿದ್ದಾರೆ. ಯಾವುದೇ ಭಾವನಾತ್ಮಕ ಹೇಳಿಕೆಗಳು ರಾಜಕೀಯದಲ್ಲಿ ಒಳ್ಳೆಯದಲ್ಲ ಎಂದು ಖಾದರ್ ತಿಳಿಸಿದ್ದಾರೆ.

Exit mobile version