Site icon PowerTV

IND vs AUS : ಏಕದಿನ ಸರಣಿಗೆ ಸ್ಟೀವ್ ಸ್ಮಿತ್ ನಾಯಕ

ಬೆಂಗಳೂರು : ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮಾರ್ಚ್​ 17 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲೂ ಸ್ಟೀವ್​ ಸ್ಮಿತ್​ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಕಳೆದ ವಾರ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಪ್ಯಾಟ್​ ಕಮಿನ್ಸ್​ ತಾಯಿ ಮರಿಯಾ ನಿಧನರಾಗಿದ್ದರು. ಈ ಕಾರಣ ಅವರು ಮನೆಯಲ್ಲೇ ಕೆಲ ಸಮಯ ಕಳೆಯಲಿಚ್ಛಿಸಿದ್ದಾರೆ ಎಂದು ಕೋಚ್​ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ನಂತರ ಪ್ಯಾಟ್ ಕಮಿನ್ಸ್​ ಆಸ್ಟ್ರೇಲಿಯಾಕ್ಕೆ ಮರಳಿದ್ದರು. ಮೂರು ಮತ್ತು ನಾಲ್ಕನೇ ಟೆಸ್ಟ್​ನ್ನು ಸ್ಟೀವ್​ ಸ್ಮಿತ್​ ಮುನ್ನಡೆಸಿದ್ದರು.

ರಿಚರ್ಡ್ಸನ್ ಬದಲಿಗೆ ನಾಥನ್ ಎಲ್ಲಿಸ್

ಇನ್ನು ಆಸಿಸ್ ಕೋಚ್​ ಆಂಡ್ರ್ಯೂ ಮೆಕ್‌ಡೊನಾಲ್ಡ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ಯಾಟ್​ ಕಮಿನ್ಸ್​ ಈ ದುಃಖಕರ ಸಂದರ್ಭದಲ್ಲಿ ಅವರ ಕುಟುಂಬದ ಜೊತೆ ಇರಲಿ ಎಂದು ನಾವು ಭಾವಿಸಿದ್ದೇವೆ. ತಂಡದಲ್ಲಿ ಕಮಿನ್ಸ್ ಬದಲಿಗೆ ಯಾರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ. ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಝೈ ರಿಚರ್ಡ್ಸನ್ ಅವರ ಬದಲಿಯಾಗಿ ನಾಥನ್ ಎಲ್ಲಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ತಾಯಿ ನಿಧನರಾದ ಹಿನ್ನೆಲೆಯಲ್ಲಿ ಪ್ಯಾಟ್ ಕಮಿನ್ಸ್ ತವರಿನಿಂದ ವಾಪಸ್ ಆಗಿಲ್ಲ. ಹೀಗಾಗಿ, ಸ್ಮಿತ್ ಅವರನ್ನೇ ನಾಯಕರನ್ನಾಗಿ ಮುಂದುವರಿಸಲಾಗಿದೆ. ಆರೋನ್ ಫಿಂಚ್ ಏಕದಿನ ನಾಯಕತ್ವದಿಂದ ಕೆಳಗಿಳಿದ ಬಳಿಕ ಪ್ಯಾಟ್ ಕಮಿನ್ಸ್ ಗೆ ಆಸಿಸ್ ನಾಯಕತ್ವ ನೀಡಲಾಗಿತ್ತು.

Exit mobile version