Site icon PowerTV

ಮೋದಿಯಂಥ ಪ್ರಧಾನಿಗಾಗಿ ಪಾಪಿಸ್ತಾನದಲ್ಲಿ ಪ್ರಾರ್ಥನೆ : ಕಟೀಲ್

ಬೆಂಗಳೂರು : ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಅಬ್ಬರದ ಭಾಷಣ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಮೋದಿಯವರ ಅಡಳಿತದಿಂದ ಭಾರತ ಪ್ರಪಂಚದಲ್ಲಿ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಪಕ್ಕದ ಶತ್ರುರಾಷ್ಟ್ರ ಪಾಪಿಸ್ತಾನದ ಮಸೀದಿಯಲ್ಲಿ ಮೋದಿಯಂತಹ ಪ್ರಧಾನಿಯನ್ನು ನೀಡುವಂತೆ ಪ್ರಾರ್ಥನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಕ್ತ ಕರ್ನಾಟಕ

500ವರ್ಷದ ಸಂಘರ್ಷ ರಾಮ ಮಂದಿರ ನಿರ್ಮಾಣದ ಕನಸ್ಸು ಮೋದಿಯವರ ನೆರವೇರಿಸಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯಿಂದ ಬಿಜೆಪಿಗೆ ಜನಬೆಂಬಲ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಲಿದ್ದು ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ನಾನೂ ‘ಮಣ್ಣಿನ ಮಗ’, ನನಗೊಂದು ಅವಕಾಶಕೊಡಿ : ಎಚ್ ಡಿಕೆಗೆ ಡಿಕೆಶಿ ಟಾಂಗ್

ಕೋವಿಡ್ ಲಸಿಕೆ ಕಂಡು ಹಿಡಿದು ಜನರಿಗೆ ಉಚಿತವಾಗಿ ನೀಡಿ ಪ್ರಪಂಚಕ್ಕೆ ಹಂಚಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಇದೇ ವೇಳೆ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕಾಂಗ್ರೆಸ್ ಜಾತಿ ಬೀಜ ಬಿತ್ತುತ್ತಿದೆ

ರಾಜ್ಯದಲ್ಲಿ ಜಾತಿವಾದ ಹುಟ್ಟು ಹಾಕಿ ಜನರಲ್ಲಿ ಜಾತಿ ಬೀಜ ಬಿತ್ತುವುದು ಕಾಂಗ್ರೆಸ್ ಹುಟ್ಟುಗುಣವಾಗಿದ್ದರಿಂದ ಅದು ಇಂದು ಅವನತಿಯಲ್ಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

ಬಿಜೆಪಿ ಯೋಜನೆಗಳು ಯಾವುದೇ ಜಾತಿಗೆ ಸೀಮಿತವಾಗದೆ ದೇಶ ಮೊದಲು ಎಂಬ ತತ್ವ ಸಿದ್ದಾಂತದ ತಳಹದಿಯಲ್ಲಿ ಬಂದಿದೆ ಎಂದು ಸಿ.ಟಿ ರವಿ ಹೇಳಿದ್ದಾರೆ.

Exit mobile version