Site icon PowerTV

ಇವು ಮೈ-ಬೆಂ ದಶಪಥ ಹೆದ್ದಾರಿಯ ವಿಶೇಷತೆಗಳು

ಬೆಂಗಳೂರು : ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇಯನ್ನು ಪ್ರಧಾನಿ ನರೇಂಧ್ರ ಮೋದಿ ಇಂದು ಲೋಕಾರ್ಪಣೆ ಮಾಡಿದ್ದಾರೆ.

ಈ ದಶಪಥ ರಸ್ತೆಯು ಹಲವು ವಿಶೇಷತೆಗಳೇನ್ನು ಹೊಂದಿದ್ದು, ಜನರ ಬಳಕೆಗೆ ಇಂದಿನಿಂದ ಲಭ್ಯವಾಗಲಿದೆ. 2018 ಮಾರ್ಚ್‌ 24ರಂದು ನಿತಿನ್‌ ಗಡ್ಕರಿ ಈ ಎಕ್ಸ್​​​​​ಪ್ರೆಸ್​​​ ಹೈವೇಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಭಾರತ್ ಮಾಲಾ ಯೋಜನೆಯಡಿ ಇದನ್ನು ನಿರ್ಮಿಸಲಾಗಿದೆ. 8,478 ಕೋಟಿ ವೆಚ್ಚದಲ್ಲಿ 117 ಕಿ.ಮೀ.ರಸ್ತೆ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ : ಬೆಂಗಳೂರು-ಮೈಸೂರು ರಸ್ತೆ ಕ್ರೆಡಿಟ್ ಯಾರಿಗೆ? : ಸಿಎಂ ಕೊಟ್ಟ ಉತ್ತರ ಏನು?

ಇಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿಯವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಮಧ್ಯಾಹ್ನ 3.15ಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.

Exit mobile version