Site icon PowerTV

ಖರ್ಗೆ ವಿರುದ್ಧದ ಆಡಿಯೋ : ಇದು ನಕಲಿ ಎಂದ ಬಿಜೆಪಿ ನಾಯಕ

ಬೆಂಗಳೂರು : ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ, ಬಿಜೆಪಿ ನಾಯಕ ಡಾ.ಎ.ಬಿ ಮಾಲಕರಡ್ಡಿ ಜಾತಿ ಪ್ರಸ್ತಾಪಿಸಿ ನಿಂದನೆ ಮಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಕಲಿ ಎಂದು ಮಾಲಕರಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಹೌದು, ಇದೀಗ ಈ ಆಡಿಯೋ ಯಾದಗಿರಿ ಜಿಲ್ಲೆಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್ ವ್ಯಾಮೋಹ ಬಿಡದ ಮಾಲಕರೆಡ್ಡಿ ಕಾಂಗ್ರೆಸ್​ ಟಿಕೆಟ್​​​ಗೆ ಮಗಳಿಂದ ಅರ್ಜಿಯನ್ನು ಹಾಕಿಸಿದ್ದರು ಎನ್ನಲಾಗಿದೆ.

ಅರ್ಜಿ ಹಾಕಿದ್ದರೂ ರಾಜ್ಯ ನಾಯಕರು ಕೇರ್ ಮಾಡದ ಹಿನ್ನೆಲೆ ಬೆಂಬಲಿಗೊಬ್ಬನ ಜೊತೆ ಮಾಲಕರೆಡ್ಡಿ ಮಾತಾನಾಡಿದ ವಿಡೀಯೋ ವೈರಲ್​​ ಆಗಿದೆ. ಮಾತನಾಡುವಾಗ ಖರ್ಗೆ ಅವರನ್ನ ಹೀಯಾಳಿಸಿ, ಜಾತಿ ನಿಂದನೆ ಮಾಡಿದ್ದಾರೆ.

ಆಡಿಯೋ ಬಗ್ಗೆ ಮಾಲಕರಡ್ಡಿ ಸ್ಪಷ್ಟನೆ

ಈ ಆಡಿಯೋ ವೈರಲ್​​ ಆಗುತ್ತಿದ್ದಂತೆ ಮಾಜಿ ಸಚಿವ ಬಿಜೆಪಿ ನಾಯಕ ಡಾ.ಎ.ಬಿ ಮಾಲಕರಡ್ಡಿ ಸ್ಪಷ್ಟನೆ ನೀಡಿದ್ದಾರೆ. ನಾನು ಅಥವಾ ನನ್ನ ಕುಟುಂಬದವರು ಕಾಂಗ್ರೆಸ್​ನಿಂದ ಸ್ಪರ್ಧಿಸಬಹುದು ಎಂಬ ಭಯದಿಂದ ತಿರುಚಿದ ಆಡಿಯೋ ಬಿಡುಗಡೆ ಮಾಡಿದ್ದಾರೆ.

ಖರ್ಗೆ ನನಗೆ ಸಮಕಾಲಿನವರು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಆಡಿಯೋ ನಾನು ಮಾತಾಡಿದಲ್ಲ ಅದು ನಕಲಿ ಆಡಿಯೋ. ಖರ್ಗೆ ಅವರು ನನಗೆ ಸಮಕಾಲಿನವರು ನನಗೆ ಅವರ ಬಗ್ಗೆ ಅಪಾರವಾದ ಗೌರವವಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದಾರೆ.

371 ಜೆ ಆರ್ಟಿಕಲ್ ಜಾರಿಯಾಗಬೇಕಾದ್ರು ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಹೀಗಾಗಿ ಈ ರೀತಿ ಜನರಲ್ಲಿ ಭಿನ್ನಾಭಿಪ್ರಾಯ ಸಂಶಯ ಹುಟ್ಟಿಸುವ ಆಡಿಯೋ ಬಿಡೋದು ಸರಿಯಲ್ಲ ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ಹಾಗೂ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Exit mobile version