Site icon PowerTV

ನರ್ಸ್ ವೇಷದಲ್ಲಿ ನವಜಾತ ಶಿಶು ಕಳ್ಳತನ : ಸಿಸಿಟಿವಿಯಲ್ಲಿ ಕೈಚಳಕ ಸೆರೆ

ಹಾವೇರಿ : ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಯಾಮಾರಿಸಿ ನವಜಾತ ಶಿಶುವನ್ನು ಕಳ್ಳತನ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಬ್ಯಾಡಗಿ ತಾಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದ ರಂಜಿತಾ ಕುಂಬಾರ ಎಂಬುವವರು ಶುಕ್ರವಾರ ಸಂಜೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಶನಿವಾರ ಸಂಜೆ ಮಹಿಳೆಯೊಬ್ಬಳು ನರ್ಸ್ ವೇಷದಲ್ಲಿ ಬಂದು ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಶಿಶುವಿನ ಅಜ್ಜಿಯನ್ನು ಯಾಮಾರಿಸಿ ಮಗುವನ್ನು ಕಳ್ಳತನ ಮಾಡಿದ್ದಾಳೆ.

ಶಿಶುವಿಗೆ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ ನರ್ಸ್ ವೇಷಧಾರಿ, ಅಜ್ಜಿ ಹಾಗೂ ಶಿಶುವನ್ನು ನಗರದ ವಿವಿಧ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಮರಳಿ ಜಿಲ್ಲಾಸ್ಪತ್ರೆಗೆ ಬರುವ ಸಂದರ್ಭ ಮಾರ್ಗಮಧ್ಯದಲ್ಲಿ ಹಣ್ಣು ತೆಗೆದುಕೊಂಡು ಬರುವುದಾಗಿ ಅಜ್ಜಿಯನ್ನು ನಂಬಿಸಿ ಶಿಶುವನ್ನು ಕಳ್ಳತನ ಮಾಡಿದ್ದಾಳೆ.

ಕಳ್ಳತನದ ದೃಶ್ಯ ಆಸ್ಪತ್ರೆಯ ಸಿಸಿಟಿವಿ(CCTV)ಯಲ್ಲಿ ಸೆರೆಯಾಗಿದೆ. ನವಜಾತ ಶಿಶುವನ್ನು ಕಳೆದುಕೊಂಡ ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

Exit mobile version