Site icon PowerTV

ಧ್ರುವನಾರಾಯಣ ಸಾವಿನ ನಿಖರ ಕಾರಣ ಬಹಿರಂಗ!

ಬೆಂಗಳೂರು : ಮಾಜಿ ಸಂಸದ ಹಾಗೂ ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ ಅವರ ಅಗಲಿಕೆ ನಾಡು ಹಾಗೂ ಕಾಂಗ್ರೆಸ್ ಪಕದ್ಷಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ಇದೀಗ, ಅವರ ಸಾವಿಗೆ ನಿಖರ ಕಾರಣ ಏನೆಂಬುದು ಬಹಿರಂಗವಾಗಿದೆ.

ಇಂದು (ಮಾರ್ಚ್ 11) ಮುಂಜಾನೆ ವಾಕಿಂಗ್‌ಗೆ ತೆರಳಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ರಕ್ತವಾಂತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದರು. ಇದೀಗ ಅವರ ಸಾವಿಗೆ ನಿಖರ ಕಾರಣ ಗೊತ್ತಾಗಿದೆ.

ಧ್ರುವನಾರಾಯಣ ಅವರ ಹೊಟ್ಟೆ ಹುಣ್ಣು ಒಡೆದು (ಅಲ್ಸರ್) ತೀವ್ರ ರಕ್ತ ಸ್ರಾವ ಉಂಟಾಗಿ ರಕ್ತ ಹೀನತೆ ಸಂಭವಿಸಿತು. ಆಗ ಹೃದಯಾಘಾತ ಮತ್ತು ಶ್ವಾಸಕೋಶ ಸ್ತಂಭನದಿಂದಾಗಿ ಧ್ರುವನಾರಾಯಣ ಮೃತಪಟ್ಟರು’ ಎಂದು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ಹಿರಿಯ ವೈದ್ಯ ಡಾ. ಮಂಜುನಾಥ್ ಮಾಹಿತಿ ನೀಡಿದ್ದಾರೆ.

6.30ರ ವೇಳೆಯಲ್ಲಿ ಎದೆ ನೋವು

ಇಂದು ಬೆಳಗ್ಗೆ 6.30ರ ವೇಳೆಗೆ ಧ್ರುವನಾರಾಯಣ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಡ್ರೈವರ್ ಗೆ ಕರೆ ಮಾಡಿದ್ದಾರೆ. ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

ಧ್ರುವನಾರಾಯಣ ತೀವ್ರ ರಕ್ತಸ್ರಾವ ಆಗಿ ಮೃತಪಟ್ಟಿದ್ದಾರೆ. ನಾವು ನೋಡಿದಾಗ ಧ್ರುವನಾರಾಯಣ ಕೋಮಾ ಸ್ಥಿತಿಯಲ್ಲಿದ್ದರು ಎಂದು ವೈದ್ಯ ಮಂಜುನಾಥ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Exit mobile version