Site icon PowerTV

ಮೈತ್ರಿ ಸಾಧಿಸಿದರೂ ತನ್ನ ಮಗನನ್ನು ಗೆಲ್ಲಿಸಿಕೊಳ್ಳಲಿಲ್ಲ!: ಜೆಡಿಎಸ್ ವಿರುದ್ಧ ಸುಮಲತಾ ವಾಗ್ದಾಳಿ

ಬೆಂಗಳೂರು : ಸುಮಲತಾ ತಮ್ಮ ಮುಂದಿನ ರಾಜಕೀಯ ನಡೆಯನ್ನು ಬಹಿರಂಗಪಡಿಸಲು ಸಂಸದೆ ಸುಮಲತಾ ವಿಶೇಷ ಸುದ್ದಿಗೋಷ್ಠಿ ಕರೆದಿದ್ದಾರೆ.

ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರೋಕ್ಷವಾಗಿ ಜೆಡಿಎಸ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತನ್ನದೇ ರಾಜಕೀಯ ಭದ್ರಕೋಟೆ ಎಂದುಕೊಂಡಿರುವ ಪಕ್ಷ, ಬೇರೊಂದು ಪಕ್ಷದ ಜೊತೆ ಮೈತ್ರಿ ಸಾಧಿಸಿದರೂ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಬೆಂಬಲ ಪಡೆದು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ಆ.. ಕಹಿ ಘಟನೆ ನೆನೆದು ಸುಮಲತಾ ಕಣ್ಣೀರು!

ಮಂಡ್ಯ ಜಿಲ್ಲೆಯ ಜನರು ಮನಸ್ಸು ಮಾಡಿದರೆ ಎಲ್ಲಾ ಭದ್ರಕೋಟೆ ಮುರಿದು ಹೋಗುವುದು ಖಚಿತ. ಜನರಿಗಾಗಿ ಕೆಲಸ ಮಾಡುವುದನ್ನು ನೋಡಲಾಗದವರು ತನ್ನ ವಿರುದ್ಧ ಸಮರ ಸಾರಿದ್ದಾರೆ ಎಂದು ಇದೇ ವೇಳೆ ಸುಮಲತಾ ಕಿಡಿಕಾರಿದ್ದಾರೆ.

ಎರಡು ಬಾರಿ ನನ್ನ ಮೇಲೆ ಹಲ್ಲೆ ಯತ್ನ

ಇನ್ನೂ ಸುಮಲತಾ ಅಂಬರೀಶ್, ಎರಡು ಬಾರಿ ತನ್ನ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿತ್ತು ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ. ಕೆ.ಆರ್.ನಗರದಲ್ಲಿ ಒಮ್ಮೆ ಹಾಗೂ ಶ್ರೀರಂಗಪಟ್ಟಣದಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನಿಸಲಾಗಿತ್ತು. ಆ ವೇಳೆ ನನ್ನ ಪರವಾಗಿ ಯಾರೂ ನಿಂತಿದ್ದರು ಎಂದು ಪ್ರಶ್ನಿಸಿದ್ದಾರೆ.

Exit mobile version