Site icon PowerTV

ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ : ಬೇಹುಗಾರಿಕೆ ಶಂಕೆ

ಬೆಂಗಳೂರು : ತಂತ್ರಜ್ಞಾನ ಯಾವ ರೀತಿ, ಹೇಗೆ ಅಭಿವೃದ್ಧಿಯಾಗುತ್ತಿದೆ ಎಂಬುದನ್ನು ಗಮನಿಸಿದರೆ ಎಂಥವರಿಗೂ ಅಚ್ಚರಿ ಆಗುತ್ತದೆ. ಕೂತಲ್ಲೇ ಒಂದೇ ಸೆಕೆಂಡಿನಲ್ಲಿ ಏನೂ ಬೇಕಾದರೂ ಮಾಡಬಹುದು. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಡೆವೆಲಪ್ ಆಗಿದೆ. ಆದ್ರೆ, ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ ಕಂಡರೆ ಎಷ್ಟು ಅಚ್ಚರಿ ಆಗಬೇಡ.

ಹೌದು, ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಈ ಅಚ್ಚರಿ  ನಡೆದಿದೆ. ಮೈಕ್ರೋ ಕ್ಯಾಮೆರಾ ಅವಳವಡಿಸಿದ್ದ ಪಾರಿವಾಳವನ್ನು ಸೆರೆ ಹಿಡಿದಿದ್ದು, ಬೇಹುಗಾರಿಕೆಗೆ ಬಳಸಿರುವುದಾಗಿ ಎಂದು ಪೊಲೀಸರು ಶಂಕಿಸಿದ್ದಾರೆ.

ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಮೀನುಗಾರರು ಕೆಲವು ದಿನಗಳ ಹಿಂದೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ಆ ಮೀನುಗಾರರ ದೋಣಿಯ ಮೇಲೆ ಒಂದು ಪಾರಿವಾಳ ಕುಳಿತಿರುವುದನ್ನು ಮೀನುಗಾರರು ಗಮನಿಸಿದ್ದಾರೆ.

ಇದನ್ನೂ ಓದಿ : Shocking! : ಭಯೋತ್ಪಾದಕರಿಂದ ಇನ್ ಸೆಕ್ಟ್ ಡ್ರೋಣ್ ಬಳಕೆ

ಟ್ರಾಲರ್‌ನಲ್ಲಿ ಪಾರಿವಾಳವನ್ನು ಸೆರೆ

ಅಷ್ಟೇ ಅಲ್ಲದೇ ಆ ಪಾರಿವಾಳದ ಕಾಲಿಗೆ ಮೈಕ್ರೊ ಕ್ಯಾಮೆರಾವನ್ನು ಬಳಸಿರುವುದನ್ನು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಎಚ್ಚೆತ್ತುಕೊಂಡ ಮೀನುಗಾರರು ತಮ್ಮ ಟ್ರಾಲರ್‌ನಲ್ಲಿ ಪಾರಿವಾಳವನ್ನು ಸೆರೆ ಹಿಡಿದರು. ನಂತರ ಅದನ್ನು ಮೆರೈನ್ ಪೊಲೀಸರಿಗೆ ಒಪ್ಪಿಸಿದ್ದಾರೆ.ಈ ಸಂಬಂಧ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Exit mobile version