Site icon PowerTV

ಗುಡ್ ನ್ಯೂಸ್ : ಹೆಣ್ಣು ಮಗುವಿಗೆ ತಂದೆಯಾದ ಉಮೇಶ್ ಯಾದವ್

ಬೆಂಗಳೂರು : ಭಾರತ ತಂಡದ ವೇಗಿ ಉಮೇಶ್ ಯಾದವ್ ಅವರ ಕುಟುಂಬಕ್ಕೆ ಸಿಹಿ ಸುದ್ದಿಯೊಂದು ಬಂದಿದ್ದು, ಯಾದವ್ ತಂದೆಯಾಗಿದ್ದಾರೆ.

ಹೌದು, ಇಂದು ಅಂತರಾಷ್ಟ್ರೀಯ ಮಹಿಳಾ ದಿನ. ಇಂದೇ ಉಮೇಶ್ ಯಾದವ್ ಪತ್ನಿ ತಾನ್ಯಾ ವಾಧ್ವಾ ಅವರು ಎರಡನೇ ಬಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂತಸದ ವಿಚಾರವನ್ನು ಉಮೇಶ್ ಯಾದವ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 2013ರ ಮೇ 29ರಂದು ಉಮೇಶ್ ಹಾಗೂ ದೆಹಲಿ ಮೂಲದ ಫ್ಯಾಷನ್ ಡಿಸೈನರ್ ತಾನ್ಯಾ ಸಪ್ತಪದಿ ತುಳಿದಿದ್ದರು.

100 ವಿಕೆಟ್ ಪಡೆದ ಗೌರವ

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ತಂಡಕ್ಕೆ ಮರಳಿದ್ದ ವೇಗಿ  ಉಮೇಶ್ ಯಾದವ್ ಅದ್ಭುತ ಬೌಲಿಂಗ್ ಮಾಡಿದ್ದರು. ಅಗಲಿದ ತಂದೆಯ ದುಃಖದ ಸಮಯದಲ್ಲಿ ಉಮೇಶ್ ಯಾದವ್ ಅದ್ಭುತ ಪ್ರದರ್ಶನ ನೀಡಿದ್ದರು. ಎರಡನೇ ದಿನದ ಮೊದಲ ಸೆಷನ್ ನಲ್ಲಿ ಡ್ರಿಂಕ್ಸ್ ಬ್ರೇಕ್ ನಂತರ ಉಮೇಶ್ ಯಾದವ್ ಬೌಲಿಂಗ್ ಮಾಡಿದ ಉಮೇಶ್, ಆಸಿಸ್ ನ ಮೂರು ಪ್ರಮುಖ ವಿಕೆಟ್ ಗಳನ್ನು ಕಬಳಿಸುವ ಮೂಲಕ ತವರಿನಲ್ಲಿ 100 ವಿಕೆಟ್ ಪಡೆದ ಗೌರವಕ್ಕೆ ಭಾಜನರಾಗಿದ್ದರು.

ಇದೀಗ, ವಿದರ್ಭ ವೇಗಿ ಉಮೇಶ್ ಯಾದವ್ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕಾಗಿ ಅಹಮದಾಬಾದ್‌ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ.

Exit mobile version