Site icon PowerTV

ಕಳ್ಳನೇ, ಈಗ ಕಳ್ಳ, ಕಳ್ಳ ಎಂದು ಕೂಗುವಂತಾಗಿದೆ : ಡಿಕೆಶಿಗೆ ಈಶ್ವರಪ್ಪ ಟಾಂಗ್

ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ Shivamo

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಕಳ್ಳನೇ, ಈಗ ಕಳ್ಳ.. ಕಳ್ಳ.. ಎಂದು ಕೂಗುವಂತಾಗಿದೆ ಎನ್ನುವ ಮೂಲಕ ಡಿ.ಕೆ ಶಿವಕುಮಾರ್ ಈ ಹಿಂದೆ ಜೈಲಿಗೆ ಹೋಗಿ ಬಂದ ವಿಷಯವನ್ನು ಕೆದಕಿದ್ದಾರೆ.

ಬೇಲ್ ಮೇಲೆ ಹೊರಗಡೆ ಇದ್ದಾರೆ

ಬಂದ್​ಗೆ ಕರೆ ಕಟ್ಟಿರೋದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಭ್ರಷ್ಟಾಚಾರ ಮಾಡಿರುವವರು. ಇವರೇ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಈಗ ಬೇಲ್ ಮೇಲೆ ಇದ್ದಾರೆ ಎಂದು ಕುಟುಕಿದ್ದಾರೆ.

ಮುಂದುವರಿದು ಮಾತನಾಡಿ, ಅರ್ಕಾವತಿ ವಿಚಾರದಲ್ಲಿ ಇವರು ಆರೋಪಿಯಾಗಿದ್ದಾರೆ. ಕಳ್ಳನೇ, ಈಗ ಕಳ್ಳ, ಕಳ್ಳ ಎಂದು ಕೂಗುವಂತಾಗಿದೆ ಎಂದು ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಗಂಡನಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ ಹಾಕಿ ಕೊಡಿ ಎಂದ ರೇವಣ್ಣ

ಇನ್ನು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಂದೇ ಒಂದು ಹೆಸರು ಹೇಳಲಿ ನೋಡೋಣ. ಈವರೆಗೂ ಒಬ್ಬರೂ ಕೂಡ ಕಾಂಗ್ರೆಸ್​​ಗೆ ಹೋಗಿಲ್ಲ. ಮತ್ತೆ ಕಾಂಗ್ರೆಸ್​ನವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಸತ್ತೋಗುತ್ತಿರುವ ಪಾರ್ಟಿ

ಸಚಿವ ವಿ.ಸೋಮಣ್ಣ ಹಾಗೂ ನಾರಾಯಣಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುವುದು ಸತ್ಯಕ್ಕೆ ದೂರವಾದ ವಿಷಯ. ಸತ್ತೋಗುತ್ತಿರುವ ಪಾರ್ಟಿಗೆ ಯಾರಾದರೂ ಸೇರ್ತಾರೇನ್ರಿ? ಈ ಮಾತಾಡಲು ಕಾಂಗ್ರೆಸ್​ನವರಿಗೆ ಯಾವ ನೈತಿಕತೆ ಇದೆ? ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.

Exit mobile version