Site icon PowerTV

Dont Miss : ಮಹಿಳೆಯರಿಗೆ ಸೀರೆ, ಬೆಳ್ಳಿ ಗಿಫ್ಟ್!

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ಚುನಾವಣಾ ಕಣ ರಂಗೇರಿದೆ. ಟಿಕೆಟ್ ಆಕಾಂಕ್ಷಿಗಳು ಹಾಗೂ ಹಾಲಿ, ಮಾಜಿ ಶಾಸಕರು ಮತದಾರರ ಓಲೆಕೈಗೆ ಕಸ್ತು ನಡೆಸುತ್ತಿದ್ದಾರೆ. ಹಾಸನ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ.

ಹೌದು, ಜೆಡಿಎಸ್​ನ ಭದ್ರಕೋಟೆ ಎಂದೇ ಖ್ಯಾತಿ ಪಡೆದಿರುವ ಹಾಸನದಲ್ಲಿ ಚುನಾವಣೆ ಕಾವು ಜೋರಾಗಿದೆ. ಚುನಾವಣೆ ಘೋಷಣೆಗೂ ಮುನ್ನವೇ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಸದ್ದು ಮಾಡುತ್ತಿವೆ. ಒಂದೆಡೆ ಜೆಡಿಎಸ್ ಟಿಕೆಟ್ ಕಾಳಗವಾದರೆ, ಮತ್ತೊಂದೆಡೆ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಆರಂಭವಾಗಿದೆ.

ಇದನ್ನೂ ಓದಿ : ದೇವೇಗೌಡ್ರು ಪ್ರೀತಿ ಮುಂದೆ ಅಮಿತ್ ಶಾ ‘ಡೈನಾಮಿಕ್’ ವರ್ಕೌಟ್ ಆಗಲ್ಲ

ಶಾಸಕ ಪ್ರೀತಂಗೌಡ ಬಾಗಿನ ಹೆಸರಿನಲ್ಲಿ ಮತದಾರರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಅಷ್ಟಲಕ್ಷ್ಮಿ ಪೂಜೆ, ಬಾಗಿನ ಹೆಸರಿನಲ್ಲಿ ಮಹಿಳೆಯರಿಗೆ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಅಡ್ಡಿಯಾಗುವ ಹಿನ್ನಲೆ ಈಗಿನಿಂದಲೇ ಗಿಫ್ಟ್ ನೀಡಲಾಗುತ್ತದೆ. ಇದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಶಾಸಕ ಪ್ರೀತಂಗೌಡ, ಈ ಹಿಂದೆಯೂ ಗೌರಿ ಹಬ್ಬದ ಸಂದರ್ಭ ಮಹಿಳೆಯರಿಗೆ ಬಾಗಿನ, ಸೀರೆ, ಪುರುಷರಿಗೆ ಒಂಚೆ ಶರ್ಟ್ ಹಂಚಿ ಸುದ್ದಿಯಾಗಿದ್ದರು. ಇದೀಗ, ರಂಗೇರುತ್ತಿರುವ ಚುನಾವಣೆ ಕಾವಿನ ನಡುವೆ ಪ್ರೀತಂಗೌಡ ಮತದಾರರಿಗೆ ದುಬಾರಿ ಉಡುಗೊರೆಗಳನ್ನು ಕೊಡುವ ಪ್ರಸಂಗ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Exit mobile version