Site icon PowerTV

‘ಲವ್ ಯೂ ಬೇಬಿ..’ : ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್ಗೆ ಲವ್ ಲೆಟರ್

ಬೆಂಗಳೂರು : ಇದು ಫೆಬ್ರವರಿ ತಿಂಗಳಲ್ಲ.. ವ್ಯಾಲೆಂಟೆನ್ಸ ಡೇನೂ (Valentines Day) ಅಲ್ಲ. ಆದ್ರೂ, ರಾ..ರಾ.. ರಕ್ಕಮ್ಮನಿಗೆ ಲವ್ ಲೆಟರ್ ಬಂದಿದೆ. ಅದು ಜೈಲಿನಿಂದ ಅನ್ನೋದು ಮತ್ತೊಂದು ವಿಶೇಷ.

ಹೌದು, ವಂಚನೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರುವ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೇ ನಟಿ ಜಾಕ್ವೆಲಿನ್ ಗೆ ಲವ್ ಲೆಟ್ ಬರೆದಿದ್ದಾನೆ. ಅದರಲ್ಲೂ ‘ಲವ್​ ಯೂ ಬೇಬಿ..’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸಾಕಷ್ಟು ತೊಂದರೆ ಆಗುತ್ತಿದೆ. ಅವರು ನಿರಂತರವಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರಿಗೆ ಮುಕ್ತಿ ಸಿಗದಂತಾಗಿದೆ. ಇದರ ಜೊತೆಗೆ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್​ಗೆ ಕಿರಿಕಿರಿ ಉಂಟು ಮಾಡುತ್ತಿದ್ದಾನೆ.

ಇದನ್ನೂ ಓದಿ : ಶಾಕಿಂಗ್: ನಟಿ ಖುಷ್ಬೂ ಸುಂದರ್ ಮೇಲೆ ಅಪ್ಪನಿಂದಲೇ ಲೈಂಗಿಕ ದೌರ್ಜನ್ಯ..!

ನನ್ನ ಬ್ಯೂಟಿಫುಲ್ ಜಾಕ್ವೆಲಿನ್​

ಹೋಳಿ ಸಂದರ್ಭದಲ್ಲಿ ಆತ ನಟಿಗೆ ಲವ್ ಲೆಟರ್ ಬರೆದಿದ್ದಾನೆ. ಈ ವೇಳೆ ‘ಲವ್​ ಯೂ ಬೇಬಿ’ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾನೆ. ‘ಒಳ್ಳೆಯ ವ್ಯಕ್ತಿ, ನನ್ನ ಬ್ಯೂಟಿಫುಲ್ ಜಾಕ್ವೆಲಿನ್​ಗೆ ಹೋಳಿ ಶುಭಾಶಯ. ಈ ದಿನ ಬಣ್ಣಗಳ ಹಬ್ಬ. ಮರೆಯಾದ ಬಣ್ಣಗಳು 100 ಪಟ್ಟು ಹೆಚ್ಚಾಗಿ ನಿಮ್ಮ ಬಳಿ ಬರುತ್ತವೆ. ಈ ವರ್ಷ ನಿಮ್ಮ ಬದುಕು ಪ್ರಕಾಶಮಾನವಾಗುತ್ತದೆ. ಆ ರೀತಿ ಆಗುವಂತೆ ಮಾಡೋದು ನನ್ನ ಜವಾಬ್ದಾರಿ ಎಂದು ಲವ್ ಲೆಟರ್ ಆರಂಭಿಸಿದ್ದಾರೆ.

ಪತ್ರದಲ್ಲಿ ಏನಿದೆ?

ಐ ಲವ್​ ಯೂ ಮೈ ಬೇಬಿ ಗರ್ಲ್​. ಯಾವಾಗಲೂ ನಗುತ್ತಾ ಇರು. ಲವ್ ಯು ಮೈ ಪ್ರಿನ್ಸೆಸ್. ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಬೊಮ್ಮ ನೀನು, ನನ್ನ ಪ್ರೀತಿ ಎಂದು ಪತ್ರದಲ್ಲಿ ಸುಕೇಶ್ ಚಂದ್ರಶೇಖರ್ ಬರೆದುಕೊಂಡಿದ್ದಾನೆ.

Exit mobile version