Site icon PowerTV

ಅಯ್ಯೋ ವಿಧಿಯೇ : ಇಬ್ಬರು ಪುತ್ರಿ ಸಹಿತ ತಾಯಿ ಸಜೀವ ದಹನ

ಬೆಂಗಳೂರು : ಅಯ್ಯೋ ವಿಧಿಯೇ? ಅವರಿನ್ನೂ ಆಟವಾಡಿ ಬೆಳೆಯಬೇಕಾದ ಮಕ್ಕಳು. ಆ ಇಬ್ಬರು ಹೆಣ್ಣುಮಕ್ಕಳ ಬಗ್ಗೆ ಪೋಷಕರು ಕಟ್ಟಿಕೊಂಡಿದ್ದ ಕನಸು ಒಂದೆರಡಲ್ಲ. ಆ ಕನಸುಗಳಿಗೆ ರೆಕ್ಕೆಪುಕ್ಕ ಬರುವ ಮುನ್ನವೇ ಆ ಕನಸುಗಳು ಮಾಸಿ ಹೋಗಿವೆ. ಆ ಇಬ್ಬರು ಹೆಣ್ಣುಮಕ್ಕಳು ತಾಯಿಯ ಜೊತೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿವೆ.

ಹೌದು, ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಇಂಥದೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಫೋಟವಾಗಿ ತಾಯಿ ಹಾಗೂ ಇಬ್ಬರು ಪುತ್ರಿಯರು ಸಜೀವ ದಹನವಾಗಿದ್ದಾರೆ.

ತಾಯಿ ರಂಜಿತಾ (31), ಪುತ್ರಿಯರಾದ ಮೃದುಲಾ (13) ಹಾಗೂ ತಾರುಣ್ಯಾ( 6) ಮೃತ ದುರ್ದೈವಿಗಳು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದ ಅವರ ಪತಿ ಆರ್‌ಟಿಪಿಎಸ್‌ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೋಸ್ಟ್ ವಾಂಟೆಡ್ ಅಂದರ್

ಘಟನೆ ಏನು?

ನಿನ್ನೆ (ಸೋಮವಾರ) ಮಧ್ಯಾಹ್ನ ಸರಿ ಸುಮಾರು 2.45ಕ್ಕೆ ಈ ಘಟನೆ ನಡೆದಿದೆ. ತಾಯಿ ರಂಜಿತಾ ಮಧ್ಯಾಹ್ನ ಇಬ್ಬರು ಮಕ್ಕಳನ್ನು ಮನೆಗೆ ಕರೆ ತಂದಿದ್ದಾರೆ. ಮನೆಯಲ್ಲಿ ಹೊಗೆ ಆವರಿಸಿದ್ದು ಕಂಡು ಜನರು ಮಾಹಿತಿ ನೀಡಿದ್ದಾರೆ.

ತಕ್ಷಣ ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ವಿಧಿ ತನ್ನ ಕ್ರೌರ್ಯ ಮೆರೆದಿದ್ದಾನೆ. ತಾಯಿ ಜೊತೆಗೆ ಇಬ್ಬರು ಪುತ್ರಿಯರು ಸಜೀವ ದಹನವಾಗಿರುವ ವಿಷಯ ತಿಳಿದ ಅವರ ಕುಟುಂಬಕ್ಕೆ ಸಿಡಿಲು ಬಂಡಿದಂತಾಗಿದೆ.

ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಹಿತಿ ಕಲೆಹಾಕಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Exit mobile version