Site icon PowerTV

Wow : ಮಾವು ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯಕಾರಿ ಲಾಭಗಳಿವೆ ಗೊತ್ತಾ?

ಬೆಂಗಳೂರು : ಮಾವಿನ ಹಣ್ಣು ಯಾರಿಗೆ ಬೇಡ? ಹಣ್ಣುಗಳ ರಾಜ ಎಂದೊಡನೆ ಥಟ್ಟನೆ ನೆನಪಾಗೋದು ಮಾವು.  ರುಚಿಯಲ್ಲಿ ಅತ್ಯಂತ ಹೆಚ್ಚು ರುಚಿ ಉಣಬಡಿಸುವ ಹಣ್ಣು ಸಹ ಹೌದು. ಕಿರಿಯರಿಂದ  ಹಿಡಿದು ಹಿರಿಯರವರೆಗೂ ಅಚ್ಚುಮೆಚ್ಚು ಈ ಮಾವು. ಇನ್ನೇನು ಯುಗಾದಿ ಸಮೀಪದಲ್ಲಿದೆ. ಅಂದರೆ, ಮಾವಿನ ಭರಾಟೆ (ಸುಗ್ಗಿ) ಆರಂಭ ಎಂದೇ ಅರ್ಥ. ಹಾಗಾದ್ರೆ, ಮಾವಿನ ಹಣ್ಣು ಸೇವನೆಯಿಂದ ಆಗುವ ಪ್ರಯೋಜನಗಳೇನು? ಮಾವು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುವುದನ್ನು ತಿಳಿಯಲು ತಪ್ಪದೇ ಈ ಸುದ್ದಿ ಓದಿ.

ಬೇಸಿಗೆಕಾಲ ಬಂತೆಂದರೆ ಮಾವಿನ ಸುಗ್ಗಿ ಎಂದೇ ಹೇಳಬಹುದು. ಮಾವಿನ  ಹಣ್ಣಿನಲ್ಲಿ  ಆರೋಗ್ಯಕ್ಕೆ  ಸಹಾಯಕವಾಗುವ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಮತ್ತು  ಕ್ಯಾಲ್ಸಿಯಂ ಇರುತ್ತದೆ. ವಿಟಮಿನ್ ಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ದುಪ್ಪಟ್ಟು ಮಾಡಲು ಸಹಾಯಕವಾಗುತ್ತೆ. ಇದರ ಜೊತೆಗೆ  ಈ ಹಣ್ಣು ರೋಗ ನಿರೋಧಕವಾಗಿಯೂ ಕೆಲಸ ನಿರ್ವಹಿಸುತ್ತದೆ.

ಸಾಮಾನ್ಯವಾಗಿ ಈ ಹಣ್ಣನ್ನು ಊಟದ ನಂತರ ಸೇವನೆ ಮಾಡುತ್ತಾರೆ. ಮಾವು  ಜೀರ್ಣಕ್ರೀಯೆಯನ್ನು ಉತ್ತಮಗೊಳಿಸುತ್ತದೆ.  ವಿಟಮಿನ್ ಎ ಇರುವುದರಿಂದ ಕಣ್ಣಿನ ರಕ್ಷಣೆಗೂ ಸಹಾಯಕವಾಗುತ್ತದೆ.  ಮಾನಿವ ಹಣ್ಣು ತಿನ್ನುವುದರಿಂದ ಹಸಿವನ್ನು ಸಹ ನಿಯಂತ್ರಿಸುತ್ತದೆ.  ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಫೈಬರ್ ಇರುವ ಆಹಾರ ಉತ್ತಮ. ಮಾವಿನಹಣ್ಣಿನಲ್ಲಿ ಅತೀ ಹೆಚ್ಚು ಪೈಬರ್ ಅಂಶ ಇರುತ್ತದೆ.

ಇದನ್ನೂ ಓದಿ : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಎಷ್ಟು ಉತ್ತಮ ಗೊತ್ತಾ?

ಅತೀಯಾದರೆ ಆರೋಗ್ಯದಲ್ಲಿ ಏರುಪೇರು

ಮಾವಿನ ಹಣ್ಣಿನಲ್ಲಿ ಗ್ಲುಟೋಮಿನ್ ಅಂಶವೂ ಇರುವುದರಿಂದ ನಮ್ಮ ಜ್ಞಾಪಕ ಶಕ್ತಿಯೂ ಸಹ ಹೆಚ್ಚಾಗುತ್ತದೆ. ಇನ್ನೂ ಅನೇಕ ಉತ್ತಮ ಅಂಶಗಳಿರುವುದರಿಂದ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಯಾವುದೇ ಆಹಾರ  ಆಗಲೀ ಅಥವಾ ಹಣ್ಣುಗಳಾಗಲೀ  ಒಳ್ಳೆಯದು ಎಂದ ಮಾತ್ರಕ್ಕೆ  ಅತಿಯಾಗಿ ತಿನ್ನಬಾರದು.  ಅತೀಯಾದರೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಕೂಡ ಇದೆ.

ಇವು ಮಾವಿನಲ್ಲಿರುವ ಪೋಷಕಾಂಶಗಳು

100 ಗ್ರಾಂ ಮಾವಿನ ಹಣ್ಣು ಸೇವಿಸುವುದರಿಂದ ದೇಹಕ್ಕೆ ಹಲವು ಪೋಷಕಾಂಶಗಳ ಲಭಿಸುತ್ತವೆ. 81 .0 ಗ್ರಾಂ ತೇವಾಂಶ, 0.6 ಗ್ರಾಂ ಸಸಾರಜನಕ, 0.4 ಗ್ರಾಂ ಕೊಬ್ಬು, 16 ಮಿ.ಗ್ರಾಂ ರಂಜಕ,14 ಮಿ.ಗ್ರಾಂ ಕಬ್ಬಿಣ, 27 ಮಿ.ಗ್ರಾಂ ಮೆಗ್ನೆಶಿಯಂ, 2743 ಐಯು ಎ ಜೀವಸತ್ವ, 0.08 ಮಿ.ಗ್ರಾಂ ಥಯಮಿನ್, 0.09 ಮಿ.ಗ್ರಾಂ ರೈಬೋಫ್ಳವಿನ್, 0.9 ಮಿ.ಗ್ರಾಂ, ನಯಾಸಿನ್, 16 ಮಿ.ಗ್ರಾಂ ಸಿ ಜೀವಸತ್ವ ಮಾವಿನ ಹಣ್ಣಿನ ಸೇವನೆಯಿಂದ ಪಡೆಯಬುದಾಗಿದೆ.

Exit mobile version