Site icon PowerTV

ಭೇಷ್ : ಆಕೆಯ ಬ್ಯಾಟ್ ನಲ್ಲಿ ಧೋನಿ ಹೆಸರು, ಅದ್ಭುತ ಪ್ರದರ್ಶನ

ಬೆಂಗಳೂರು : ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ ನ ಮೊದಲ ದಿನದಿಂದಲೇ ತಂಡಗಳು ಅತ್ಯುತ್ತಮ ಪ್ರದರ್ಶನದಿಂದ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದೆ. ಇತ್ತೀಚಿನ ರೋಚನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ಭರ್ಜರಿ ಗೆಲುವು ಸಾಧಿಸಿದೆ. ಆದರೆ, ಈ ಪಂದ್ಯದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ಆ ಆಟಗಾರ್ತಿ ಮಾತ್ರ.

ಹೌದು, ಉತ್ತರ ಪ್ರದೇಶದ ಕಿರಣ್ ನವಗಿರೆ ಅವರೇ ಕ್ರೀಡಾ ಪ್ರೇಮಿಗಳಿಂದ ಭೇಷ್ ಎನಿಸಿಕೊಂಡಿರುವ ಬ್ಯಾಟರ್. ನವಗಿರೆ ಕೇವಲ 43 ಎಸೆತಗಳಲ್ಲಿ 53 ರನ್ ಗಳಿಸಿ ತಂದಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಬಳಸಿರುವ ಬ್ಯಾಟ್ ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿರುವುದು ಮತ್ತೊಂದು ವಿಶೇಷ. ಈ ಫೋಟೋ ಸದ್ಯ ವೈಲ್ಲೆಡೆ ವೈರಲ್ ಆಗಿದೆ.

ಬ್ಯಾಟ್ ನಲ್ಲಿ MSD 07 ಹೆಸರು

ಯುಪಿ ವಾರಿಯರ್ಸ್ ಪರ ಮಹಿಳಾ ಐಪಿಎಲ್ ಆಡುತ್ತಿರುವ ಬ್ಯಾಟರ್ ಕಿರನ್ ನವರಿಗೆ ಅವರ ಬ್ಯಾಟ್ ಗೆ ಸ್ಪಾನ್ಸರ್ ಇರಲಿಲ್ಲ. ಹೀಗಾಗಿ, ತಾವೇ ‘MSD 07’ ಎಂದು ಬರೆದುಕೊಂಡು ಬ್ಯಾಟ್ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : ಕಿಂಗ್ ಕೊಹ್ಲಿ ದಾಖಲೆ ಸರಿಗಟ್ಟಿದ ಉಮೇಶ್ ಯಾದವ್

ಬ್ಯಾಟ್ ನಲ್ಲಿ ಧೋನಿ ಮೇಲಿನ ಅಭಿಮಾನ

ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿ ನಿಂತು ಬ್ಯಾಟ್ ಮಾಡಿದ ಕಿರಣ್ ನವಗಿರೆ ಅವರ ಬ್ಯಾಟ್‌ನಲ್ಲಿ “ಎಂಎಸ್‌ಡಿ07” ಎಂದು ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟಿಕ್ಕರ್‌ರಹಿತ ಬ್ಯಾಟ್‌ನಲ್ಲಿ ಆಡುತ್ತಿರುವ ಕಿರಣ್, ಹಿಡಿಕೆಯ ಕೆಳಭಾಗದ ಬ್ಯಾಟ್‌ನ ಹಿಂಬದಿಯಲ್ಲಿ ಮಾರ್ಕ‌್ರನಲ್ಲಿ ‘MSD07’ ಎಂದು ಬರೆದುಕೊಂಡಿರುವುದು ಗೋಚರಿಸುತ್ತದೆ. ಧೋನಿ ಅವರ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Exit mobile version