Site icon PowerTV

ಚೀನಾ ಮತ್ತಷ್ಟು ಸ್ಟ್ರಾಂಗ್ : 8ನೇ ಬಾರಿ ರಕ್ಷಣಾ ಬಜೆಟ್ ಗಾತ್ರ ಹೆಚ್ಚಳ

ಬೆಂಗಳೂರು : ಚೀನಾ ದೇಶ ಅಭಿವೃದ್ಧಿಯ ಜೊತೆಗೆ ದೇಶ ರಕ್ಷಣೆ ಹಾಗೂ ಶತ್ರುಗಳ ಸಂಹಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಸಸತ ಎಂಟನೇ ಬಾರಿಯೂ ರಕ್ಷಣಾ ಬಜೆಟ್ ಗಾತ್ರವನ್ನು ಹೆಚ್ಚಳ ಮಾಡಿದೆ.

ಹೌದು, ಈ ಬಾರಿಯೂ ಚೀನಾ ತನ್ನ ರಕ್ಷಣಾ ಬಜೆಟ್‌ನ ಮೊತ್ತವನ್ನು ಹೆಚ್ಚಿಸಿದೆ. ಮಿಲಿಟರಿಗಾಗಿ 1.55 ಟ್ರಿಲಿಯನ್ ಯುವಾನ್‌ ಅಂದರೆ 224 ಶತಕೋಟಿ ಡಾಲರ್‌ ಅನ್ನು ಒದಗಿಸಲಾಗಿದ್ದು, ಇದು ಕಳೆದ ಬಾರಿಗಿಂತಲೂ ಶೇಕಡಾ 7.2 ರಷ್ಟು ಅಧಿಕವಾಗಿದೆ.

ಚೀನಾ ಕಳೆದ ವರ್ಷ ತನ್ನ ರಕ್ಷಣಾ ಬಜೆಟ್‌ಗಾಗಿ 1.45 ಟ್ರಿಲಿಯನ್ ಯುವಾನ್‌ ಅನ್ನು ನಿಗದಿಪಡಿಸಿತ್ತು. ಆ ವರ್ಷವೂ ಬಜೆಟ್‌ನಲ್ಲಿ ಶೇ. 7.1ರಷ್ಟು ಹೆಚ್ಚಳವಾಗಿತ್ತು. ಈ ವರ್ಷ ರಕ್ಷಣಾ ವೆಚ್ಚವನ್ನು 1.55 ಟ್ರಿಲಿಯನ್ ಯುವಾನ್‌ಗೆ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ : ಭಾರತ–ಅಮೇರಿಕ ಜಂಟಿ ಸೇನಾ ತಾಲೀಮಿಗೆ ಚೀನಾ ವಿರೋಧ

ಅಮೆರಿಕನ್‌ ಡಾಲರ್ ಮೌಲ್ಯದ ದೃಷ್ಟಿಯಿಂದ ನೋಡುವುದಾದರೆ, ಚೀನಾದ ಈ ವರ್ಷದ ರಕ್ಷಣಾ ವೆಚ್ಚವು ಕಳೆದ ವರ್ಷಕ್ಕಿಂತಲೂ ಕಡಿಮೆ. ಕಳೆದ ಬಾರಿ 230 ಶತಕೋಟಿ ಡಾಲರ್‌ ಇದ್ದ ರಕ್ಷಣಾ ಬಜೆಟ್‌ ಈ ಬಾರಿ 224 ಶತಕೋಟಿ ಡಾಲರ್‌ಗೆ ಇಳಿದಿದೆ.

ಭಾರತದ ದೃಷ್ಟಿಕೋನದಿಂದ ನೋಡುವುದಾದರೆ, ಚೀನಾದ ರಕ್ಷಣಾ ಬಜೆಟ್ ಭಾರತದ ರಕ್ಷಣಾ ಅನುದಾನಕ್ಕಿಂತಲೂ ಮೂರು ಪಟ್ಟು ಅಧಿಕವೆನಿಸಿಕೊಂಡಿದೆ. 2023-24ರ ಭಾರತದ ರಕ್ಷಣಾ ಬಜೆಟ್ 5.94 ಲಕ್ಷ ಕೋಟಿ ರೂ. ಆಗಿದೆ.

Exit mobile version