Site icon PowerTV

ಈಶಾನ್ಯ ರಾಜ್ಯಗಳ ಚುನಾವಣೆ; ಬಿಜೆಪಿಗೆ ಭಾರೀ ಮುನ್ನಡೆ

ಬೆಂಗಳೂರು : ಮೂರು ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕುತೂಹಲ ಕೆರಳಿಸಿದ್ದು ತ್ರಿಪುರಾ, ನಾಗಲ್ಯಾಂಡ್ ಹಾಗೂ ಮೇಘಾಲಯದಲ್ಲಿ ಬಿಜೆಪಿ ಭಾರೀ ಮುನ್ನಡೆ ಪಡೆದಿದೆ.

ಮೂರು ರಾಜ್ಯಗಳ ವಿಧಾನಸಭೆ ಸೇರಿದಂತೆ ಅರುಣಾಚಲ ಪ್ರದೇಶದ ಲುಮ್ಲಾ ವಿಧಾನಸಭಾ ಕ್ಷೇತ್ರ, ಜಾರ್ಖಂಡ್ನ ರಾಮಗಢ, ತಮಿಳುನಾಡಿನ ಈರೋಡ್ ಪೂರ್ವ, ಪಶ್ಚಿಮ ಬಂಗಾಳದ ಸಾಗದಿರ್ಘಿ ಹಾಗೂ ಕಸ್ಬಾ ಪೇಠ್, ಮಹಾರಾಷ್ಟ್ರದ ಚಿಂಚ್ ವಾಡ್  ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದೆ.

ತ್ರಿಪುರಾ ಮತ್ತು ನಾಗಲ್ಯಾಂಡ್ ನಲ್ಲಿ ಬಿಜೆಪಿ ಮೈತ್ರಿಕೂಟ ಆರಂಭಿಕವಾಗಿ ದೊಡ್ಡ ಮುನ್ನಡೆ ಸಾಧಿಸಿದೆ. ಮೇಘಾಲಯದಲ್ಲಿ ಎನ್ ಪಿಪಿ ಹಾಗೂ ಬಿಜೆಪಿ ನಡುವೆ ತೀವ್ರ ಫೈಟ್ ನಡೆಯುತ್ತಿದೆ. ಮೇಘಾಲಯದ ಸಂಗ್ಮಾ ನೇತೃತ್ವದ ಎನ್ ಪಿಪಿ ಮುನ್ನಡೆ ಕಾಯ್ದುಕೊಂಡಿದೆ. ಅರುಣಾಚಲ ಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಇದನ್ನೂ ಓದಿ : ಕಾಂಗ್ರೆಸ್ ಗೆ ಅಂತಿಮ ಮೊಳೆ ಹೊಡೆಯುತ್ತೇವೆ : ಸಚಿವ ಆರ್. ಅಶೋಕ್

ತ್ರಿಪುರಾದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ

ತ್ರಿಪುರಾದಲ್ಲಿ ಬಿಜೆಪಿ 37, ಟಿಎಂಪಿ 11, ನಾಗಾಲ್ಯಾಂಡ್ ನಲ್ಲಿ ಎನ್ ಪಿಪಿ 24 ಮತ್ತು ಬಿಜೆಪಿ 8, ಟಿಎಂಸಿ 17 ಸ್ಥಾನ ಪಡೆದಿದೆ. ಈ ರಾಜ್ಯಗಳಲ್ಲಿ ತಲಾ 60  ಸ್ಥಾನಗಳಿವೆ. ತ್ರಿಪುರಾದಲ್ಲಿ ಬಿಜೆಪಿ ಸತತ ಎರಡನೇ ಅವಧಿಗೆ ಸರ್ಕಾರವನ್ನು ರಚಿಸಲಿದೆ ಎಂದು ಹೇಳಲಾಗುತ್ತಿದೆ.

ಮೇಘಾಲಯ ಅತಂತ್ರ

ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಮೇಘಾಲಯ ರಾಜ್ಯದಲ್ಲಿ ಈ ಬಾರಿ ಅತಂತ್ರ ಫಲಿತಾಂಶ ಬರಲಿದೆ ಎನ್ನಲಾಗಿದೆ. ಎನ್ ಪಿಪಿ ಮೇಘಾಲಯದಲ್ಲಿ ಅತಿಹೆಚ್ಚು ಸ್ಥಾನ ಪಡೆದರೂ ಬಹುಮತ ಪಡೆಯುವುದಿಲ್ಲ. 18ರಿಂದ 20 ಸ್ಥಾನಗಳು ಲಭಿಸಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ 6ರಿಂದ 12 ಸ್ಥಾನ ಗಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Exit mobile version