Site icon PowerTV

ಶಾರುಖ್ ಖಾನ್ ಪತ್ನಿ ಗೌರಿ ವಿರುದ್ಧ ಎಫ್ ಐಆರ್

ಬೆಂಗಳೂರು:  ಬಾಲಿವುಡ್ ಕಿಂಗ್ ಖಾನ್ ಶಾರುಖ್ ಪತ್ನಿ ಗೌರಿ ಖಾನ್ ದೊಡ್ಡ ಸಂಕಷ್ಟ ಎದುರಾಗಿದ್ದು, ಲಕ್ನೋದಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಗೌರಿ ಖಾನ್ ತುಳಸಿಯಾನಿ ಕನ್ಸ್ ಸ್ಟ್ರಕ್ಷನ್ ಹಾಗೂ ಡೆವಲಪರ್ಸ್ ಲಿಮಿಟೆಡ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ತುಳಸಿಯಾನಿ ಕಂಪನಿಯು ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಫ್ಲ್ಯಾಟ್ ನೀಡದ ಹಿನ್ನೆಲೆಯಲ್ಲಿ ಗ್ರಾಹಕರು ಗೌರಿ ಖಾನ್ ಹಾಗೂ ಕಂಪನಿಯ ನಿರ್ದೇಶಕರ ವಿರುದ್ಧ ದೂರು ನೀಡಿದೆ.

ಮುಂಬೈನ ನಿವಾಸಿಯಾದ ಕಿರಿತ್ ಜಸ್ವಂತ್ ಶಾ ಎಂಬುವವರು ಲಕ್ನೋದಲ್ಲಿ ಈ ಯೋಜನೆಯಡಿ ಫ್ಲ್ಯಾಟ್ ಖರೀದಿ ಮಾಡಿದ್ದರು. 86 ಲಕ್ಷ ರೂ. ಪಾವತಿಸಿದ್ದರೂ ಈವರೆಗೂ ಕಿರಿತ್ ಅವರುಗೆ ಫ್ಲ್ಯಾಟ್ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಗೌರಿ ಖಾನ್ ಹಣ ದೋಚಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಯನ್ ರಾಜ್ ಜೊತೆಗಿನ ಕ್ಯೂಟ್ ವಿಡೀಯೋ ಶೇರ್ ಮಾಡಿದ ಮೇಘನಾ ರಾಜ್

ಎಫ್ಐಆರ್ ದಾಖಲು

ಗ್ರಾಹಕರ ದೂರಿನ ಮೇರೆಗೆ ತುಳಸಿಯಾನಿ ಕಂಪನಿಯ ಅನಿಲ್ ಕುಮಾರ್ ತುಳಸಿಯಾನಿ, ಮಹೇಶ್ ತುಳಸಿಯಾನಿ ಹಾಗೂ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ ವಂಚನೆ ಆರೋಪದಡಿ ಎಫ್ಐಆರ್ ದಾಖಲಾಗಿದೆ ಎಂದು ಸುಶಾಂತ್ ಗಾಲ್ಫ್ ಸಿಟಿ ಇನ್ಸ್ ಪೆಕ್ಟರ್ ಶೈಲೇಂದ್ರ ಗಿರಿ ಮಾಹಿತಿ ನೀಡಿದ್ದಾರೆ.

Exit mobile version