Site icon PowerTV

ಇನ್ನೂ ಹತ್ತು ವರ್ಷಗಳಾದ್ರೂ ಬಿಜೆಪಿ ತೆಗೆಯೋಕೆ ಆಗಲ್ಲ – ಮಾಜಿ ಸಿಎಂ ಹೆಚ್ಡಿಕೆ

ಬೆಂಗಳೂರು: ಸಿದ್ದರಾಮಯ್ಯ ಅಲ್ಲ ಸುಳ್ಳಿನ ರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋಕೆ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​​ ಶಾಸಕ ಹೆಚ್​.ಡಿ ಕುಮಾರಸ್ವಾಮಿ ಅವರು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿಯೇ ಸರ್ಕಾರ ಪತನದ ಬಗ್ಗೆ ಮಾತನ್ನಾಡಿದ್ದರು. ಬಿಜೆಪಿ ಅಕ್ರಮ ಹೊರ ತಂದಿದ್ದು ನಾನು, ಸಿದ್ಧರಾಮಯ್ಯ ಅಲ್ಲ. ನಿಮ್ಮ ಯೋಗ್ಯತೆಗೆ ಸರಿಯಾದ ರೀತಿಯಲ್ಲಿ ಮಾತಮಾಡಿ ಸಿದ್ಧರಾಮಯ್ಯ. ಚೇರ್​ಗಾಗಿ ಕುತಂತ್ರದ ರಾಜಕಾರಣ ಮಾಡ್ತೀರಿ. ಬಿಜೆಪಿಯವರೂ ನನಗೆ ಸಿಎಂ ಸ್ಥಾ‌ನ ಕೊಡೋಕೆ ರೆಡಿಯಾಗಿದರು. ಅವರಿಗೆ ನಾಚಿಕೆ ಆಗಬೇಕು. ಇನ್ನು ಹತ್ತು ವರ್ಷಗಳಾದ್ರೂ ಬಿಜೆಪಿಯನ್ನು ತೆಗೆಯೋಕೆ ಆಗಲ್ಲ. ಜೆಡಿಎಸ್​ನಿಂದ ಮಾತ್ರ ಬಿಜೆಪಿ ತೆಗೆಯೋಕೆ ಸಾಧ್ಯ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ಬ್ರಾಹ್ಮಣ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇಡೀ ಬ್ರಾಹ್ಮಣ ಸಮುದಾಯ ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಡ್ತಿಲ್ಲ. ಪೇಶ್ವೆ ಮೂಲದ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಉತ್ತರ ಕೊಡಲಿ. ನಾನು ಬ್ರಾಹ್ಮಣರು ಸಿಎಂ ಆಗಬಾರದು ಎಂದಿಲ್ಲ, ಪೇಶ್ವೆ ಡಿಎನ್ಎ ಸಿಎಂ ಆಗಬಾರದು ಎಂದಿದ್ದೇನೆ. ಈಗಲೂ ನನ್ನ ಹೇಳಿಕೆಗೆ ನಾನು ಬದ್ಧ. ಯಾವ ಸಮಾಜದವರಾದರೂ ಸಿಎಂ ಆಗಲಿ. ಆದರೆ, ಪೇಶ್ವೆ ಡಿಎನ್‌ಎ ಇರೋರು ಆಗಬಾರದು ಎಂದು ಹೆಚ್ಡಿಕೆ ಮತ್ತೊಮ್ಮೆ ಪೇಶ್ವೆ ಡಿಎನ್​ಎ ಬಗ್ಗೆ ಪುನರುಚ್ಚರಿಸಿದರು.

Exit mobile version