Site icon PowerTV

ಸೈಲೆಂಟ್ ಸುನೀಲನ ಮೇಲೆ ಒರೊಬ್ಬರಿ 17 ಕೇಸ್​… ನಿಜಕ್ಕೂ ಸುನೀಲ್​ ಯಾರು?

ಬೆಂಗಳೂರು: ರಾಜ್ಯ ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಈಗಿರುವಾಗಲೇ ಹಲವು ಕುಖ್ಯಾತ ರೌಡಿಗಳಿಗೆ ಗಾಳ ಹಾಕುತ್ತಿದೆ ಎಂಬ ಆರೋಪ ಕೇಲಿ ಬಂದ ಬೆನ್ನಲ್ಲೆಯಲ್ಲಿ ಕುಖ್ಯಾತ ರೌಡಿ ಶೀಟರ್​​ ಸೈಲೆಂಟ್​ ಸುನೀಲ್​ ಬಿಜೆಪಿ ಸಂಸದರು, ಮಿನಿಸ್ಟರ್​ ಜತೆಗೆ ವೇದಿಕೆ ಹಂಚಿಕೊಂಡಿದ್ದ.

ಹಾಲಿ ಶಾಸಕರು ಈ ಬಾರಿಯೂ ಟಿಕೆಟ್ ಪಡೆಯುಬೇಕು ಅಂತ ಸರ್ಕಸ್ ಮಾಡುತ್ತಾ ಇದ್ದರೆ, ಈ ಕಡೆ ರೌಡಿ ಸೈಲೆಂಟ್​​ ಸುನೀಲ್ ಜಮೀರ್​ ವಿರುದ್ಧ ಸ್ಪರ್ಧಿಸಲು ಚಾಮರಾಜಪೇಟೆ ಬಿಜೆಪಿ ಟಿಕೆಟ್​ಗಾಗಿ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಈ ಸೈಲೆಂಟ್​ ಸುನೀಲನ ಮೇಲೆ ಒರೊಬ್ಬರಿ 17 ಕೇಸ್ ಫೀಟ್​ ಮಾಡಲಾಗಿದೆ.

ಸದ್ಯ ಬೆಂಗಳೂರಿನ ಪ್ರಕಾಶ ನಗರದ ನಿವಾಸಿಯಾಗಿರುವ 41 ವರ್ಷದ ಸೈಲೆಂಟ್ ಸುನೀಲ ಮೂಲತಃ ಕೇರಳದವನು. ಇವನ ಮೂಲ ಹೆಸರು ಸುನೀಲ್​ ಕುಮಾರ್​ ಎಂದು. ಹತ್ತನೇ ತರಗತಿ ಓದುವಾಗಲೇ ತಮ್ಮ ತಾಯಿಗೆ ಮತ್ತೊಬ್ಬ ನಗೆಚಾಟಿ ಮಾಡಿದನೆಂದು ‘ಬಾಲಾಪರಾಧಿ’ಯಾಗಿ ಈ ಸೈಲೆಂಟ್ ಸುನೀಲ ಜೈಲುವಾಸ ಅನುಭವಿಸಿದಾತ ಈ ಬೆಂಗಳೂರಿನ ಅಂಡರ್​​ ವರ್ಲ್ಡ್​ಗೆ ಎಂಟ್ರಿಯಾಗಿದ್ದ. ಬಳಿಕ ರೌಡಿಸಂನಲ್ಲಿ ಬೆಳೆದು ಜಾಮೀನು ಮೇಲೆಗೆ ಹೊರ ಬಂದು ಹಲವರಿಗೆ ಜೀವ ಬೆದರಿಕೆ ಹಾಕಿ ತನ್ನದೆ ಲೋಕ ಸೃಷ್ಠಿಸಿದ್ದ ಈ ಸುನೀಲ್​.

ಸೈಲೆಂಟ್ ಸುನೀಲ್​ ಮೇಲೆ ಕೇಸ್​ ಯಾವ ಯಾವ ಠಾಣೆಯಲ್ಲಿ ಇದೆ ಗೊತ್ತಾ.?

ಸೈಲೆಂಟ್ ಅಂತ ಹೆಸರು ಬಂದಿದ್ದು ಏಕೆ?

ರೌಡಿಸಂನಲ್ಲಿ ಅಬ್ಬರಿಸೋ ಸುನೀಲನಿಗೆ ಸೈಲೆಂಟ್ ಸುನೀಲ ಅಂತ ಹೆಸರು ಬರೋದಕ್ಕೂ ಕಾರಣಗಳಿವೆ. ಈತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುವ ವೇಳೆ ಸುನೀಲ ಸೈಲೆಂಟ್ ಆಗೇ ಇರ್ತಿದ್ದ. ಏನೇ ಪ್ರಶ್ನೆ ಮಾಡಿದ್ರು, ಗಪ್ ಚುಪ್ ಆಗಿ ಇರ್ತಿದ್ದ. ಇದೇ ಕಾರಣಕ್ಕೆ ಆತನಿಗೆ ಸೈಲೆಂಟ್ ಸುನೀಲ ಅನ್ನೋ ಹೆಸರು ಬಂತು.

 

Exit mobile version