Site icon PowerTV

ಹುಚ್ಚು ನಾಯಿ ಕಡಿತಕ್ಕೆ ಇಬ್ಬರು ಮಕ್ಕಳು ಬಲಿ

ಬಳ್ಳಾರಿ : ಹುಚ್ಚು ನಾಯಿ ಕಡಿತಕ್ಕೆ ಇಬ್ಬರು ಮಕ್ಕಳು ಬಲಿಯಾದ ಘಟನೆ ಬಳ್ಳಾರಿ ಜಿಲ್ಲೆಯ ಬಾದನಹಟ್ಟಿಯಲ್ಲಿ ನಡೆದಿದೆ.

3 ವರ್ಷದ ಸುರಕ್ಷಿತ ಮತ್ತು 7 ವರ್ಷದ ಶಾಂತಕುಮಾರ್ ಸಾವನ್ನಪ್ಪಿದ್ದು, ನವೆಂಬರ್‌ 21 ಬಾಲಕಿ ಮತ್ತು ನವೆಂಬರ್‌ 22ರಂದು ಬಾಲಕ ಸಾವನ್ನಪ್ಪಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹುಚ್ಚು ನಾಯಿಯನ್ನು ಹೊಡೆದು ಕೊಂದ ಗ್ರಾಮಸ್ಥರು, ನಾಯಿಗಳಿಗೆ ವಾಕ್ಸಿನ್ ನೀಡಲು ಕ್ರಮಕೈಗೊಂಡಿದೆ.

ಇನ್ನು, ನಾಯಿ ಕಡಿತ ಕಂಡು ಬಂದರೆ ಕೂಡಲೇ ಅಸ್ಪತ್ರೆಗೆ ಬರುವಂತೆ ಜಾಗೃತಿ ಮಾಡಿಸುತಿದ್ದು, ಸುರಕ್ಷಿತಗ ಮುಖಕ್ಕೆ, ಶಾಂತಕುಮಾರ್ ಗೆ ಕೈಗೆ ನಾಯಿ ಕಚ್ಚಿದೆ.ಸುರಕ್ಷಿತಗೆ ಚುಚ್ಚು ಮದ್ದು ಹಾಕಿದರೂ ಬದುಕಲಿಲ್ಲ, ಶಾಂತಕುಮಾರ್ ಸಕಾಲಿಕವಾಗಿ ಚಿಕಿತ್ಸೆ ಪಡೆದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದ್ದು, ಮತ್ತೊಂದು ಬಾಲಕಿಗೆ ಕಚ್ಚಿದ್ದರೂ, ಗುಣಮುಖ ಆಗಿದ್ದಾರೆ.

Exit mobile version