Site icon PowerTV

ಸೈಲೆಂಟ್​ ಸುನೀಲ್​ ಜತೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಇರುವ ಫೋಟೋ ವೈರಲ್

ಬೆಂಗಳೂರು: ಶಿಸ್ತಿನ ಪಕ್ಷ ಎನ್ನಿಸಿಕೊಳ್ಳುವ ರಾಜ್ಯ ಬಿಜೆಪಿ ಪಾಳಯದಲ್ಲಿ ಈಗ ರೌಡಿ ದರ್ಬಾರ್ ಶುರುವಾಗಿದೆ. ಇದಕ್ಕೆ ತಕ್ಕಂತೆ ಸೈಲೆಂಟ್​ ಸುನೀಲ್​ ಜತೆ ಬಿಜೆಪಿ ರಾಜ್ಯಸಭಾ ಸದಸ್ಯ ಇರುವ ಮತ್ತೊಂದು ಫೋಟೋ ವೈರಲ್​ ಆಗಿದೆ.

ಬಿಜೆಪಿ ಸೇರ್ಪಡೆಗೆ ಹಲವು ದಿನಗಳಿಂದ ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ತಯಾರಿ ನಡೆಸಿದ್ದ. ಅದರಂತೆ ಭಾನುವಾರ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್ ಜೊತೆ ಸೈಲೆಂಟ್​ ಸುನೀಲ್​ ವೇದಿಕೆ ಹಂಚಿಕೊಂಡಿದ್ದ. ಇದೀಗ ರಾಜ್ಯಸಭಾ ಸದಸ್ಯ ಜಗ್ಗೇಶ್ ಜೊತೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಫೋಟೋದಲ್ಲಿ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ಗೆ ಬೃಹತ್ ಹಾರ ಹಾಕಿ ಫೋಟೋಗೆ ಸುನೀಲ್​ ಪೋಸ್ ಕೊಟ್ಟಿದ್ದಾನೆ. ಬಿಜೆಪಿ ಸಚಿವರು, ಶಾಸಕರು, ಸಂಸದರನ್ನೇ ಬೆಂಗಳೂರಿನ ರೌಡಿಗಳು ಭೇಟಿ ಮಾಡುತ್ತಿದ್ದಾರೆ. ಇತ್ತೀಚಿಗೆ ಸಚಿವ ಸೋಮಣ್ಣ ಕಚೇರಿಯಲ್ಲಿ ಕಾಣಿಸಿಕೊಂಡಿದ್ದ ವಿಲ್ಸನ್ ಗಾರ್ಡನ್ ನಾಗ, ಮಂಡ್ಯದಲ್ಲಿ ಬಿಜೆಪಿ ಸೇರಿಕೊಂಡು ಟಿಕೆಟ್‌ಗಾಗಿ ಫೈಟರ್ ರವಿ ಓಡಾಡುತ್ತಿದ್ದಾನೆ. ಈಗ ರೌಡಿಗಳ ಜೊತೆಗಿನ ಬಿಜೆಪಿ ನಾಯಕರ ನಂಟು ಒಂದೊಂದಾಗಿ ರಿವೀಲ್ ಆಗುತ್ತಿದೆ.

Exit mobile version