Site icon PowerTV

ಏಕದಿನ ಸರಣಿಯಿಂದ ಬಾಂಗ್ಲಾದೇಶದ ನಾಯಕ ಔಟ್​​​​​​​​

ನವದೆಹಲಿ; ಭಾರತ ಹಾಗೂ ಬಾಂಗ್ಲಾದೇಶ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ನಡೆಯಲಿದ್ದು, ಮೊದಲ ಪಂದ್ಯ ಡಿ. 4 (ಭಾನುವಾರ) ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಬಾಂಗ್ಲಾ ಕ್ರಿಕೆಟ್​ ತಂಡದಲ್ಲಿ ಆಟಗಾರರ ಗಾಯದ ಸರಣಿ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನಿನ್ನೆ ಗಾಯದ ಸಮಸ್ಯೆಯಿಂದ ತಂಡದ ವೇಗದ ಬೌಲರ್ ತಸ್ಕಿನ್ ಅಹ್ಮದ್ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯಿಂದ ಮಾಹಿತಿ ಹೊರಬಿದ್ದಿತ್ತು. ಇದೀಗ ಬಾಂಗ್ಲಾ ತಂಡ ತನ್ನ ನಿಯಮಿತ ನಾಯಕನಿಲ್ಲದೆ ಇಡೀ ಟೂರ್ನಿಯನ್ನು ಆಡಬೇಕಿದೆ. ಬಾಂಗ್ಲಾದೇಶದ ನಾಯಕ ತಮೀಮ್ ಇಕ್ಬಾಲ್ ಇಂಜುರಿಯಿಂದಾಗಿ ಇಡೀ ಏಕದಿನ ಸರಣಿಯಿಂದ ಹೊರಗುಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಗುರುವಾರವಷ್ಟೇ ಭಾರತ ತಂಡ ಬಾಂಗ್ಲಾದೇಶ ತಲುಪಿದೆ. ಮೊದಲ ಏಕದಿನ ಪಂದ್ಯ ಭಾನುವಾರ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಡಿಸೆಂಬರ್ 07 ನಡೆದರೆ, ಮೂರನೇ ಪಂದ್ಯ ಡಿಸೆಂಬರ್ 10 ನಡೆಯಲಿದೆ. ಬಾಂಗ್ಲಾದೇಶದ ನಾಯಕ ತಮೀಮ್ ಗಾಯದ ಸಮಸ್ಯೆಯಿಂದಾಗಿ ಈ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ.

Exit mobile version